Kannada NewsKarnataka NewsLatest

ಕರ್ನಾಟಕದಲ್ಲಿ ಮತ್ತೊಂದು ದಾಖಲೆ: ಒಂದೇ ದಿನ 5 ಸಾವಿರ ದಾಟಿದ ಸೋಂಕಿತರು

ಪ್ರಗತಿವಾಹಿನಿ ಸುದ್ದಿ, ಬೆಂಗಳೂರು – ಕರ್ನಾಟಕದಲ್ಲಿ ಇದೇ ಮೊದಲ ಬಾರಿಗೆ ಕೊರೋನಾ ಸೋಂಕಿತರ ಸಂಖ್ಯೆ ಒಂದೇ ದಿನ 5 ಸಾವಿರ ದಾಟಿದೆ. ಇಂದು 5030 ಜನರಿಗೆ ಸೋಂಕು ದೃಢಪಟ್ಟಿದೆ.

ರಾಜ್ಯದಲ್ಲಿ ಇಂದು 97 ಜನರು ಸಾವಿಗೀಡಾಗಿದ್ದಾರೆ. ಒಟ್ಟೂ ಸೋಂಕಿತರ ಸಂಖ್ಯೆ 80,863 ಹಾಗೂ ಒಟ್ಟೂ ಸಾವಿಗೀಡಾದವರ ಸಂಖ್ಯೆ 1616 ಆಗಿದೆ.

ಇಂದು ಬೆಂಗಳೂರಿನಲ್ಲಿ 2207, ರಾಯಚೂರು 258, ಕಲಬುರಗಿ 229, ದಕ್ಷಿಣ ಕನ್ನಡ 218 ಹಾಗೂ ಬೆಳಗಾವಿಯಲ್ಲಿ 214 ಜನರಿಗೆ ಸೋಂಕು ಪತ್ತೆಯಾಗಿದೆ.

ಧಾರವಾಡದಲ್ಲಿ 183, ಬಳ್ಳಾರಿ 164, ಬೆಂಗಳೂರು ಗ್ರಾಮಾಂತರ 161, ಉಡುಪಿ 160, ಮೈಸೂರು 116, ಹಾಸನ 108, ದಾವಣಗೆರೆ 107, ಬಾಗಲಕೋಟೆ 106, ಬೀದರ್ 94, ಉತ್ತರ ಕರ್ನಾಟಕ 83, ಶಿವಮೊಗ್ಗ 82, ಗದಗ 72, ಚಿಕ್ಕಬಳ್ಳಾಪುರ 65, ಚಿಕ್ಕಮಗಳೂರು 62, ತುಮಕೂರು 56,ಯಾದಗಿರಿ 55, ಮಂಡ್ಯ50, ಕೋಲಾರ 40, ಚಾಮರಾಜನಗರದ 27, ರಾಮನಗರ 26, ಕೊಡಗಿ 22, ವಿಜಯಪುರ 20, ಹಾವೇರಿ 18, ಕೊಪ್ಪಳ 17, ಚಿತ್ರದುರ್ಗ 10 ಜನರಿಗೆ ಇಂದು ಸೋಂಕು ಪತ್ತೆಯಾಗಿದೆ.

Home add -Advt

ಬೆಂಗಳೂರಿನಲ್ಲಿ ಇಂದು 48 ಜನರು ಸಾವಿಗೀಡಾಗಿದ್ದಾರೆ. ಮೈಸೂರಲ್ಲಿ 8, ದಕ್ಷಿಣ ಕನ್ನಡದಲ್ಲಿ 7, ಬಳ್ಳಾರಿಯಲ್ಲಿ 5, ಬೆಳಗಾವಿಯಲ್ಲಿ 4 ಜನರು ಸಾವಿಗೀಡಾಗಿದ್ದಾರೆ.

Related Articles

Back to top button