Kannada NewsLatest

ಧರ್ಮಚಕ್ರ ಆರಾಧನಾ ಮಹಾಮಹೋತ್ಸವ,ವೃತೋಧ್ಯಾಪನೆ ಮುನಿ ನಿವಾಸ ಹಾಗೂ ಪಾರ್ಶ್ವನಾಥ ಭವನದ ಉದ್ಘಾಟನೆ ನೆರವೇರಿಸಿದ ಶಾಸಕ ಶ್ರೀಮಂತ ಪಾಟೀಲ್

ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ಬಣಜವಾಡ ಗ್ರಾಮದಲ್ಲಿ ನಡೆದ ಪಂಚ ಕಲ್ಯಾಣ ಪ್ರತಿಷ್ಠ ಮಹೋತ್ಸವ 5ನೇ ವಾರ್ಷಿಕೋತ್ಸವದ ನಿಮಿತ್ತ ಧರ್ಮಚಕ್ರ ಆರಾಧನಾ ಮಹಾಮಹೋತ್ಸವ ಮತ್ತು ವಿವಿಧ ವೃತೋಧ್ಯಾಪನೆ ಮುನಿ ನಿವಾಸ ಹಾಗೂ ಪಾರ್ಶ್ವನಾಥ ಭವನದ ಉದ್ಘಾಟನೆ ಸಮಾರಂಭದಲ್ಲಿ ಕಾಗವಾಡ ಶಾಸಕ ಹಾಗೂ ಮಾಜಿ ಸಚಿವ ಶ್ರೀಮಂತ (ತಾತ್ಯಾ) ಪಾಟೀಲ ಅವರು  ಭಾಗವಹಿಸಿ, ನಾಂದನಿ ಮಠದ ಸ್ವಸ್ತಿಶ್ರೀ ಜೀನಸೇನ ಭಟ್ಟಾರಕ ಪಟ್ಟಾಚಾರ್ಯ ಮಹಾಸ್ವಾಮಿಜಿ ಅವರ ಆಶೀರ್ವಾದ ಪಡೆದು ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು.

ಇದೇ ಸಮಯದಲ್ಲಿ ಮೊದಲು ಜೈನ ಬಸದಿಗೆ ಭೇಟಿನಿಡಿ ಶ್ರೀ ಮಹಾವೀರ ದೇವರ ದರ್ಶನವನ್ನು ಪಡೆದು, ಮುನಿ ನಿವಾಸ ಹಾಗೂ ಪಾರ್ಶ್ವನಾಥ ಭವನದ ಉದ್ಘಾಟನೆ ನೆರವೇರಿಸಿದರು.

ದೇವಸ್ಥಾನದ ಆವರಣದಲ್ಲಿ ಭಕ್ತರಿಗೆ ಅನುಕೂಲವಾಗಲೆಂದು ಶುದ್ಧ ಕುಡಿಯುವ ನೀರಿನ ಘಟಕವನ್ನು ನೀಡಿದ್ದು ಅದನ್ನು ವೀಕ್ಷಣೆ ಮಾಡಿದರು. ಬಣಜವಾಡ ಗ್ರಾಮದ ಜೈನ ಸಮಾಜದ ಮುಖಂಡರು ಪಾರ್ಶ್ವನಾಥ ಭವನದ ನಿರ್ಮಾಣಕ್ಕೆ ಸಹಾಯ ಮಾಡಿದರ ಸಲುವಾಗಿ ಶಾಸಕರನ್ನು ಪ್ರೀತಿಯಿಂದ ಸತ್ಕರಿಸಿ ಗೌರವಿಸಿದರು.

ಈ ಸಮಯದಲ್ಲಿ ಸ್ಥಳೀಯ ಮುಖಂಡರು, ಕಾರ್ಯಕರ್ತರು ಹಾಗೂ  ಜೈನ ಸಮಾಜದ ಬಾಂಧವರು, ಮಾತಾಜಿ ಅವರು, ಶ್ರಾವಕ ಹಾಗೂ ಶ್ರಾವಕಿಯರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button