Kannada NewsKarnataka NewsLatest

ಅಧಿಕಾರಿಗಳ ಕಾರಿನಲ್ಲಿ ಕಸ ಸುರಿಯುವ ಎಚ್ಚರಿಕೆ ನೀಡಿದ ಶಾಸಕ

“ಬೆಳಗಾವಿ ದಕ್ಷಿಣ ಮತಕ್ಷೇತ್ರದಲ್ಲಿ ಕಸ ವಿಲೇವಾರಿ ಸರಿಯಾಗಿ ಆಗುತ್ತಿಲ್ಲ, ಕಸ ಸಂಗ್ರಹದ ನಿರ್ವಹಣೆಯಲ್ಲಿ ಲೋಪಗಳಿದ್ದು, ವಾರದಲ್ಲಿ ಅದನ್ನು ಸರಿಪಡಿಸಿಕೊಳ್ಳದಿದ್ದರೆ ಕಸವನ್ನು ಅಧಿಕಾರಿಗಳ ಕಾರಿನಲ್ಲಿ ಸುರಿಯುವ ಜನಾಂದೋಲನ ಶುರು ಮಾಡಬೇಕಾಗುತ್ತದೆ”

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಬೆಳಗಾವಿ ದಕ್ಷಿಣ ಮತಕ್ಷೇತ್ರದ ಶಾಸಕ ಅಭಯ ಪಾಟೀಲ ಭಾನುವಾರ  ಸೈಕಲ್ ಮೇಲೆ ಕ್ಷೇತ್ರ ಪ್ರದಕ್ಷಿಣೆ ಹಾಕಿ ಅಭಿವೃದ್ಧಿಯ ಅವಲೋಕನ ಮಾಡಿದ್ದಲ್ಲದೆ, ಜನರ ಅಹವಾಲು ಆಲಿಸಿದರು.
 ಬೆಳ್ಳಂಬೆಳಿಗ್ಗೆ  ಸೈಕಲ್ ಏರಿದ ಶಾಸಕ ಕ್ಷೇತ್ರದಲ್ಲಿ ಸುತ್ತಾಡಿ ಕ್ಷೇತ್ರದ ಅಭಿವೃದ್ಧಿ ಕಾಮಗಾರಿಗಳ  ಪರಿಶೀಲನೆ ಮಾಡಿದರು. ಕಾಮಗಾರಿಗಳ ಗುಣಮಟ್ಟದ ಕುರಿತು ಸಾರ್ವಜನಿಕರ ದೂರುಗಳನ್ನು ಆಲಿಸಿದರು.
“ಬೆಳಗಾವಿ ದಕ್ಷಿಣ ಮತಕ್ಷೇತ್ರದಲ್ಲಿ ಕಸ ವಿಲೇವಾರಿ ಸರಿಯಾಗಿ ಆಗುತ್ತಿಲ್ಲ, ಕಸ ಸಂಗ್ರಹದ ನಿರ್ವಹಣೆಯಲ್ಲಿ ಲೋಪಗಳಿದ್ದು, ವಾರದಲ್ಲಿ ಅದನ್ನು ಸರಿಪಡಿಸಿಕೊಳ್ಳದಿದ್ದರೆ ಕಸವನ್ನು ಅಧಿಕಾರಿಗಳ ಕಾರಿನಲ್ಲಿ ಸುರಿಯುವ ಜನಾಂದೋಲನ ಶುರು ಮಾಡಬೇಕಾಗುತ್ತದೆ” ಎಂದು ಅಭಯ ಪಾಟೀಲ ಈ ಸಂದರ್ಭದಲ್ಲಿ ಎಚ್ಚರಿಕೆ ನೀಡಿದರು.
ಸಾರ್ವಜನಿಕರಿಂದ ನೂರಾರು ಸಮಸ್ಯೆ ಹಾಗೂ ದೂರುಗಳು ಕೇಳಿ ಬಂದವು. ವಿವಿಧ ಕಾಮಗಾರಿಗಳ ಗುಣಮಟ್ಟ ಸರಿಯಾಗಿ ಆಗುತ್ತಿಲ್ಲ. ಚನ್ನಮ್ಮ ನಗರ, ಟಿಳಕವಾಡಿ ಭಾಗದಲ್ಲಿ ರಸ್ತೆಗಳ ಕ್ರಾಸ್ ಕಟಿಂಗ್ ಮಾಡಿರುವ ಖಾಸಗಿ ಸಂಸ್ಥೆಗಳು ಅವುಗಳನ್ನು ಸರಿಪಡಿಸಿಲ್ಲ. ಮಹಾನಗರಪಾಲಿಕೆಯ ಅಧಿಕಾರಿಗಳೂ ಅಂತವರ ವಿರುದ್ಧ ಕ್ರಮ ತೆಗೆದುಕೊಂಡಿಲ್ಲ. ಚನ್ನಮ್ಮ ನಗರದ ಮುಖ್ಯರಸ್ತೆಯಲ್ಲೇ ಜನ ಸಂಚರಿಸದಂತಹ ಸ್ಥಿತಿ ನಿರ್ಮಾಣವಾಗಿದೆ. ರಸ್ತೆ ಸಂಪೂರ್ಣ ಹದಗೆಟ್ಟುಹೋಗಿದೆ. ಯಾರೂ ಸಮಸ್ಯೆ ಕೇಳುವವರಿಲ್ಲ ಎಂದು ಜನರು ಆಕ್ರೋಶವ್ಯಕ್ತಪಡಿಸಿದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button