Kannada NewsKarnataka NewsLatest

*ಎಂಎಲ್ಸಿ ಸಿ.ಟಿ.ರವಿಗೆ ಹೈಕೋರ್ಟ್ ತಪರಾಕಿ*

ಪ್ರಗತಿವಾಹಿನಿ ಸುದ್ದಿ, ಬೆಂಗಳೂರು : ಬಿಜೆಪಿ ಎಂಎಲ್​​​ಸಿ ಸಿ.ಟಿ. ರವಿಗೆ ಹೈಕೋರ್ಟ್ ತಪಾರಾಕಿ ನೀಡಿದೆ.

ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್​ ವಿರುದ್ಧ ಅಶ್ಲೀಲ ಪದ ಬಳಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹೈಕೋರ್ಟ್ ಗರಂ ಆಗಿದೆ. ಪ್ರಕರಣ ರದ್ಧುಗೊಳಿಸಬೇಕೆಂದು ಕೋರಿ ಸಲ್ಲಿಸಿದ್ದ ಸಿ.ಟಿ.ರವಿ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿದೆ.

Home add -Advt

ತಮ್ಮ ವಿರುದ್ಧದ ಪ್ರಕರಣ ರದ್ದು ಕೋರಿ ರವಿ ಸಲ್ಲಿಸಿದ್ದ ಅರ್ಜಿ ವಜಾ ಮಾಡಲಾಗಿದೆ. ಕರ್ನಾಟಕ ಹೈಕೋರ್ಟ್​ನ ನ್ಯಾಯಮೂರ್ತಿ ನಾಗಪ್ರಸನ್ನ ಪೀಠದಿಂದ ವಜಾ ಆಗಿದೆ.

ಇಂತಹ ಹೇಳಿಕೆ ಸದನದಲ್ಲಿ ಕೊಟ್ಟರೂ ರಕ್ಷಣೆ ಇರಲ್ಲ. ಒಂದು ವೇಳೆ ಆರೋಪಿಸಲಾದ ಮಾತುಗಳನ್ನು ಆಡಿದ್ದರೆ, ಆರೋಪಿಸಲಾದ ವರ್ತನೆಯನ್ನು ಪ್ರದರ್ಶಿಸಿದ್ದರೆ, ಅದು ಮಹಿಳೆಗೆ ಘನತೆಗೆ ಧಕ್ಕೆ ಉಂಟು ಮಾಡುತ್ತದೆ. ಇದಕ್ಕೂ, ಸದನ ಕಾರ್ಯಕಲಾಪಕ್ಕೂ ಸಂಬಂಧವಿಲ್ಲ, ಸದನದಲ್ಲೇ ಇಂತಹ ಹೇಳಿಕೆಯನ್ನೂ ನೀಡಿದ್ದರೂ, ಸದನದ ಸದಸ್ಯ ಎಂಬ ಕಾರಣಕ್ಕೆ ರಕ್ಷಣೆ ಸಾಧ್ಯವಿಲ್ಲ ಎಂದು ಕರ್ನಾಟಕ ಹೈಕೋರ್ಟ್​​ ಆದೇಶದಲ್ಲಿ ಸ್ಪಷ್ಟವಾಗಿ ಹೇಳಿದೆ.

ಇದರಿಂದಾಗಿ ಸಿ.ಟಿ.ರವಿಗೆ ತೀವ್ರ ಮುಖಭಂಗವಾದಂತಾಗಿದೆ.

Related Articles

Back to top button