Latest

ಮದರಸಾಗೆ ನುಗ್ಗಿ ದುರ್ಗಾ ಪೂಜೆ ನೆರವೇರಿಸಿದ ಗುಂಪು

ಪ್ರಗತಿವಾಹಿನಿ ಸುದ್ದಿ; ಬೀದರ್: ದಸರಾ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದ ಗುಂಪು ಮದರಾಸಾಗೆ ನುಗ್ಗಿ ದುರ್ಗಾ ಪೂಜೆ ಮಾಡಿ ಘೋಷಣೆಗಳನ್ನು ಕೂಗಿದ ಘಟನೆ ಬೀದರ್ ಜಿಲ್ಲೆಯಲ್ಲಿ ನಡೆದಿದೆ.

ದಸರಾ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದ ಗುಂಪು ಐತಿಹಾಸಿಕ ಮದರಸಾಗೆ ನುಗ್ಗಿ ಕಟ್ಟಡದಲ್ಲಿ ಘೋಷಣೆ ಕೂಗಿ, ಪೂಜೆ ನೆರವೇರಿಸಿದೆ ಎಂದು ದೂರಲಾಗಿದ್ದು, ಪ್ರಕರಣ ಸಂಬಂಧ 9 ಜನರ ವಿರುದ್ಧ ಕೇಸ್ ದಾಖಲಾಗಿದೆ. ಆರೋಪಿಗಳನ್ನು ಬಂಧಿಸಿ ಕ್ರಮ ಕೈಗೊಳ್ಳದಿದ್ದರೆ ಪ್ರತಿಭಟನೆ ಮಾಡುವುದಾಗಿ ಮುಸ್ಲಿಂ ಸಂಘಟನೆ ಎಚ್ಚರಿಸಿದೆ.

1460ರಲ್ಲಿ ನಿರ್ಮಿಸಿರುವ ಮೊಹಮ್ಮದ್ ಗವಾನ್ ಮದರಸಾ ಭಾರತೀಯ ಪುರಾತತ್ವ ಇಲಾಖೆ ಸಂರಕ್ಷಣೆಯಲ್ಲಿದ್ದು, ರಾಷ್ಟ್ರೀಯ ಪ್ರಾಮುಖ್ಯತೆಯ ಕಟ್ಟಡಗಳ ಪಟ್ಟಿಯಲ್ಲಿಯೂ ಇದು ಸ್ಥಾನ ಪಡೆದಿದೆ. ದಸರಾ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದ ಗುಂಪೊಂದು ಮದರಸಾ ಗೇಟ್ ಬೀಗ ಮುರಿದು ಒಳನುಗ್ಗಿ ಮದರಸಾ ಆವರಣದಲ್ಲಿ ಹಿಂದೂ ಧರ್ಮಕ್ಕೆ ಜೈಕಾರ ಕೂಈಘಲಾಗಿದ್ದು, ಕಟ್ಟಡದ ಒಂದು ಭಾಗದಲ್ಲಿ ಪೂಜೆ ನೆರವೇರಿಸಿದೆ.

ಈ ಘಟನೆಗಳ ವಿಡಿಯೋ ಸಾಮಾಜಿಕ ಜಾಲತಾಣಗಲಲ್ಲಿ ವೈರಲ್ ಆಗಿದೆ. ಆರೋಪಿಗಳನ್ನು ಬಂಧಿಸದಿದ್ದರೆ ಬೃಹತ್ ಪ್ರತಿಭಟನೆ ನಡೆಸುವುದಾಗಿ ಮುಸ್ಲಿಂ ಸಂಗಹ್ಟನೆಗಳು ಎಚ್ಚರಿಸಿವೆ.

ಅಯೋಧ್ಯೆ ಶ್ರೀರಾಮಮಂದಿರ ನಿರ್ಮಾಣ ಕಾರ್ಯ ಶೇ. 50ರಷ್ಟು ಪೂರ್ಣ: ಯೋಗಿ ಆದಿತ್ಯನಾಥ

https://pragati.taskdun.com/religion/50pc-of-work-on-ayodhya-ram-mandir-completed-says-cm-yogi-adityanatha/

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button