Belagavi NewsBelgaum NewsLatest
*ಬೈಕ್ ಸಮೇತ ಸೇತುವೆಯಿಂದ ನದಿಗೆ ಬಿದ್ದ ದಂಪತಿ: ಇಬ್ಬರೂ ದುರ್ಮರಣ*

ಪ್ರಗತಿವಾಹಿನಿ ಸುದ್ದಿ: ಮಳೆ ಅವಾಂತರದಿಂದಾಗಿ ಬೈಕ್ ಸ್ಕಿಡ್ ಆದ ಪರಿಣಾಮ ಸೇತುವೆ ಮೇಲಿಂದ ನದಿಗೆ ಬಿದ್ದು ದಂಪತಿ ಸಾವನ್ನಪ್ಪಿರುವ ಘಟನೆ ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ನೊಗನಿಹಾಳ ಗ್ರಾಮದಲ್ಲಿ ನಡೆದಿದೆ.
ಸುರೇಶ್ ಬಡಿಗೇರ (53) ಹಾಗೂ ಜಯಶ್ರೀ ಬಡಿಗೇರ (45) ಮೃತ ದಂಪತಿ. ಸೇತುವೆ ದಾಟುವಾಗ ಬೈಕ್ ಸ್ಕಿಡ್ ಆಗಿದ್ದು, ಬೈಕ್ ಸಮೇತ ದಂಪತಿ ಘಟಪ್ರಭಾ ನದಿಗೆ ಬಿದ್ದಿದ್ದಾರೆ.
ಅಗ್ನಿಶಾಮಕ ಸಿಬ್ಬಂದಿ, ಪೊಲೀಸರು ಘಟಪ್ರಭಾ ನದಿಯಿಂದ ಜಯಶ್ರೀ ಅವರ ಶವ ಹೊರತೆಗೆದಿದ್ದಾರೆ. ಜಯಶ್ರೀ ಪತಿ ಸುರೇಶ್ ಗಾಗಿ ನದಿಯಲ್ಲಿ ಶೋಧ ಕಾರ್ಯಾಚರಣೆ ನಡೆಸಲಾಗಿದೆ.
ಸೇತುವೆಗೆ ತಡೆಗೋಡೆ ಇಲ್ಲದಿರುವುದೇ ದುರಂತಕ್ಕೆ ಕಾರಣ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಘಟನಾ ಸ್ಥಳಕ್ಕೆ ಪೊಲೀಸರು ದೌಡಾಯಿಸಿ ಪರಿಶೀಲನೆ ನಡೆಸಿದ್ದಾರೆ.




