Karnataka NewsNational

*ಬೆಂಗಳೂರಿಗೆ ಸಾಗಿಸುತ್ತಿದ್ದ 3 ಕೋಟಿ ಮೌಲ್ಯದ ಮೋಬೈಲ್ ಕಳ್ಳತನ*

ಪ್ರಗತಿವಾಹಿನಿ ಸುದ್ದಿ : ದೆಹಲಿಯಿಂದ ಬೆಂಗಳೂರಿಗೆ ಸಾವಿರಾರು ಮೊಬೈಲ್ ಗಳನ್ನು ಸಾಗಿಸಲಾಗುತ್ತಿದ್ದ ಕಂಟೈನರ್‌ ಕಳ್ಳತನವಾಗಿದ್ದು, ಶಿಯೋಮಿ ಕಂಪನಿಗೆ ಸೇರಿದ 3 ಕೋಟಿ ಮೌಲ್ಯದ ಮೊಬೈಲ್ ಕಳುವಾಗಿದೆ. 

ದೆಹಲಿಯಿಂದ ಬೆಂಗಳೂರಿಗೆ ಹೊರಟಿದ್ದ ಕಂಟೈನರ್ ಬೆಂಗಳೂರಿಗೆ ತಲುಪಿಲ್ಲ. ಕಳೆದ ನ. 22ರಂದು ಈ ಘಟನೆ ನಡೆದಿದೆ. ಕಂಟೈನರ್ ಸರಿಯಾದ ಸಮಯಕ್ಕೆ ಬೆಂಗಳೂರು ತಲುಪದ ಕಾರಣ ಅನುಮಾನಗೊಂಡ ಕಂಪನಿಯವರು ಗಾಡಿಯ ಜಿಪಿಎಸ್‌ ಪರಿಶೀಲಿಯಾದಾಗ ಚಿಕ್ಕಬಳ್ಳಾಪುರ ತಾಲೂಕಿನ ರೆಡ್ಡಿಗೊಲ್ಲರಹಳ್ಳಿ ಬಳಿ ಕಂಟೈನರ್ ನಿಂತಿದ್ದು ಗೊತ್ತಾಗಿದೆ.

Home add -Advt

ಹೀಗಾಗಿ ಗಾಡಿಯ ಲೊಕೇಶನ್ ಮಾಹಿತಿಯನ್ನು ಪೆರೇಸಂದ್ರೆ ಠಾಣೆ ಪೊಲೀಸರಿಗೆ ಕಂಪನಿಯವರು ನೀಡಿದ್ದು, ಪೊಲೀಸರು ಸ್ಥಳಕ್ಕೆ ಬಂದು ಪರಿಶೀಲಿಸಿದಾಗ ಖಾಲಿ ಕಂಟೈನ‌ರ್ ನಿಂತಿರುವುದು ಗೊತ್ತಾಗಿದೆ. ಆದ್ರೆ ಕಂಟೈನರ್ ಚಾಲಕ ನಾಪತ್ತೆಯಾಗಿದ್ದಾನೆ.

ಈ ಕಂಟೈನರ್ ನ ಚಾಲಕ ರಾಹುಲ್ ಎಂಬಾತ ಎಂದು ತಿಳಿದುಬಂದಿದ್ದು, ಕೋಟ್ಯಂತರ ರೂಪಾಯಿಗಳ ಮೊಬೈಲ್ ಕದ್ದು ಖಾಲಿ ಕಂಟೈನರ್‌ ಸ್ಥಳದಲ್ಲಿ ಬಿಟ್ಟು ಪರಾರಿಯಾಗಿದ್ದಾನೆ. ಸದ್ಯ ಈತನಿಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.

Related Articles

Back to top button