Kannada NewsKarnataka NewsLatestNationalPolitics

*ನಾಳೆ ಮಾಕ್ ಡ್ರಿಲ್: ಕರ್ನಾಟಕದಲ್ಲಿ ಎಲ್ಲೆಲ್ಲಿ?*

ಪ್ರಗತಿವಾಹಿನಿ ಸುದ್ದಿ: ದೇಶಾದ್ಯಂತ 25 ರಾಜ್ಯಗಳ ರಾಜಧಾನಿ ಸೇರಿದಂತೆ ಒಟ್ಟು 244 ಪ್ರದೇಶಗಳಲ್ಲಿ ಈ ಮಾಕ್ ಡ್ರಿಲ್ ನಡೆಯಲಿದೆ.

ಕರ್ನಾಟಕದಲ್ಲಿ ಬೆಂಗಳೂರು ನಗರ, ಉತ್ತರ ಕನ್ನಡದ ಮಲ್ಲಾಪುರ ಹಾಗೂ ರಾಯಚೂರು ಜಿಲ್ಲೆಯ ಶಕ್ತಿನಗರದಲ್ಲಿ ಮಾಕ್ ಡ್ರಿಲ್ ನಡೆಸಲು ನಿರ್ಧರಿಸಲಾಗಿತ್ತು.

ಆದರೆ ಕೊನೆ ಕ್ಷಣದಲ್ಲಿ ಮುಂದೂಡಲಾಗಿದೆ.

ಏಪ್ರಿಲ್ 22 ರಂದು ಪಹಲ್ಲಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯ ನಂತರ ಭಾರತ ಹಾಗೂ ಪಾಕಿಸ್ತಾನದ ಸಂಬಂಧ ಉದ್ವಿಗ್ನಗೊಂಡಿದೆ. ಭಾರತ ಸರ್ಕಾರ ದೇಶಾದ್ಯಂತ ನಾಗರಿಕ ರಕ್ಷಣಾ ಸನ್ನದ್ಧತೆಯನ್ನು ಹೆಚ್ಚಿಸುತ್ತಿದೆ. ಪಾಕಿಸ್ತಾನಕ್ಕೆ ಎಚ್ಚರಿಕೆಯ ಕರೆಗಂಟೆಯಾಗಿ ಭಾರತ ನಾಳೆ ದೇಶಾದ್ಯಂತ 244 ಜಿಲ್ಲೆಗಳಲ್ಲಿ ಮಾಕ್ ಡ್ರಿಲ್ ನಡೆಸಲು ಸಿದ್ಧತೆ ನಡೆಸುತ್ತಿದೆ.

ಅಧಿಕಾರಿಗಳ ಪ್ರಕಾರ, ಗೃಹ ಸಚಿವಾಲಯ (MHA) ಸೋಮವಾರ ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಮೇ 7 ರಂದು ಸಂಘಟಿತ ನಾಗರಿಕ ರಕ್ಷಣಾ ತಾಲೀಮು ನಡೆಸುವಂತೆ ನಿರ್ದೇಶನ ನೀಡಿದೆ. ಈ ವ್ಯಾಯಾಮಗಳು ಭಾರತದ ಎಲ್ಲಾ 244 ಗೊತ್ತುಪಡಿಸಿದ ನಾಗರಿಕ ರಕ್ಷಣಾ ಜಿಲ್ಲೆಗಳನ್ನು ಒಳಗೊಳ್ಳಲಿವೆ.

1971 ರ ಬಳಿಕಭಾರತ ಇದೇ ಮೊದಲ ಬಾರಿಗೆ ಮಾಕ್ ಡ್ರಿಲ್ ನಡೆಸುತ್ತಿದೆ. 1971ರ ಸಂದರ್ಭಭಾರತ ಸಮರಾಭ್ಯಾಸ ನಡೆಸಿದ ಬೆನ್ನಲ್ಲೇ ಪಾಕಿಸ್ತಾನದೊಂದಿಗೆ ಯುದ್ಧ ನಡೆದಿತ್ತು. 

ಗಮನಾರ್ಹವಾಗಿ 1999 ರ ಕಾರ್ಗಿಲ್ ಸಂಘರ್ಷದ ಸಮಯದಲ್ಲಿ ಕೂಡಾ ಅಂತಹ ಯಾವುದೇ ರಾಷ್ಟ್ರೀಯ ಮಟ್ಟದ ನಾಗರಿಕ ರಕ್ಷಣಾ ಕವಾಯತುಗಳನ್ನು ನಡೆಸಲಾಗಿರಲಿಲ್ಲ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button