Kannada NewsKarnataka News

ಮೋದಿ ಭೇಟಿಯಾದ ಕೆಎಲ್ಇ ಸಾಹಸಿ ಹುಡುಗಿ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಇತ್ತೀಚೆಗೆ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತೆಯಾದ ಹುಬ್ಬಳ್ಳಿಯ ಸಾಹಸಿ ನಂದಿತಾ ನಾಗನಗೌಡರ ಡಾ.ಪ್ರಭಾಕರ ಕೋರೆಯವರೊಂದಿಗೆ ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿಯಾದರು.

ಏಷಿಯಾ, ಯುರೋಪ, ಆಫ್ರಿಕಾ ಹಾಗೂ ಆಸ್ಟ್ರೇಲಿಯಾ ಖಂಡಗಳಲ್ಲಿರುವ ಅತೀ ಎತ್ತರದ ಶಿಖರಗಳ ತುತ್ತತುದಿಯಲ್ಲಿ ಭಾರತದ ರಾಷ್ಟ್ರಧ್ವಜವನ್ನು ಹಾರಿಸಿರುವುದು ಅವರ ಹೆಗ್ಗಳಿಕೆ.

ಕೆಎಲ್‌ಇ ಸಂಸ್ಥೆಯ ಬಿ.ವಿ.ಭೂಮರಡ್ಡಿ ಅಭಿಯಾಂತ್ರಿಕ ಹಾಗೂ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಇಂಜಿನಿಯರಿಂಗ್ ಪದವಿಯನ್ನು ಪೂರೈಸಿ, ಇಂಗ್ಲಂಡ್‌ನಲ್ಲಿ ಎಂ.ಬಿ.ಎ. ಪದವಿಯೊಂದಿಗೆ ಅಲ್ಲಿಯೇ ನೆಲೆಸಿರುವ ನಂದಿತಾ ಭಾರತಕ್ಕೆ ಆಗಮಿಸಿದ ಸಂದರ್ಭದಲ್ಲಿ ಅವರ ಸಾಧನೆಯನ್ನು ಡಾ.ಪ್ರಭಾಕರ ಕೋರೆಯವರು ಪ್ರಶಂಸಿಸಿ, ಪ್ರಧಾನಿ ಶ್ರೀ ನರೇಂದ್ರ ಮೋದಿಯವರೊಂದಿಗೆ ಭೇಟಿ ಮಾಡಿಸಿದರು.

ಈ ಸಂದರ್ಭದಲ್ಲಿ ಮೋದಿಜಿಯವರು ನಂದಿತಾ ಅವರ ಅದಮ್ಯ ದೇಶಾಭಿಮಾನವನ್ನು ಕೊಂಡಾಡಿ ಅಭಿನಂದಿಸಿ ಅವರ ಮುಂದಿನ ಸಾಧನೆಗೆ ಪ್ರೇರಣೆ ನೀಡಿದ್ದಾರೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button