Latest

ಸಿದ್ದರಾಮಯ್ಯ ಆರೋಗ್ಯ ವಿಚಾರಿಸಿದ ಸಿಎಂ, ಸಚಿವರು

ಪ್ರಗತಿವಾಹಿನಿ ಸುದ್ದಿ, ಬೆಂಗಳೂರು – ಹೃದಯ ಶಸ್ತ್ರ ಚಿಕಿತ್ಸಗೆ ಒಳಗಾದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಆರೋಗ್ಯವನ್ನು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ವಿಚಾರಿಸಿದರು. ಸಚಿವರಾದ ಬಸವರಾಜ ಬೊಮ್ಮಾಯಿ ಹಾಗೂ ಕೆ.ಎಸ್.ಈಶ್ವರಪ್ಪ ಸಾಥ್ ನೀಡಿದರು.

ಬುಧವಾರ ಬೆಳಗ್ಗೆ ಎದೆ ನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಸಿದ್ದರಾಮಯ್ಯ ಅವರು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅವರಿಗೆ ಆ್ಯಂಜಿಯೋ ಪ್ಲ್ಯಾಸ್ಟಿ ಮಾಡಲಾಗಿದೆ.

Home add -Advt

ಯಡಿಯೂರಪ್ಪ ಹಾಗೂ ಸಚಿವರು ಇಂದು ಸಂಜೆ ಆಸ್ಪತ್ರೆಗೆ ಭೇಟಿ ನೀಡಿ ಆರೋಗ್ಯ ವಿಚಾರಿಸಿದರು. ಇದೇ ವೇಳೆ ನಗೆ ಚಟಾಕಿ ಹಾರಿಸಿ ಎಲ್ಲರೂ ನಗುವಿನಲ್ಲಿ ಮುಳುಗಿರುವ ಫೋಟೋ ಬಿಡುಗಡೆಯಾಗಿದೆ.

ಈಚೆಗೆ ನಡೆದ ಚುನಾವಣೆ ವೇಳೆ ಬಾಯಿಗೆ ಬಂದಂತೆ ಆರೋಪ -ಪ್ರತ್ಯಾರೋಪ ಮಾಡಿಕೊಂಡಿದ್ದವರು ಇವರೇನಾ ಎನ್ನುವ ಅನುಮಾನ ಬರುವಂತಿದೆ ಫೋಟೋ.

 

 

Related Articles

Back to top button