ಜೂನ್ 4ಕ್ಕೆ ಮಾನ್ಸೂನ್ ಪ್ರವೇಶ?

ಪ್ರಗತಿವಾಹಿನಿ ಸುದ್ದಿ, ತಿರುವನಂತಪುರ: ಈ ವರ್ಷ ಜೂನ್ 4ರಂದು ಕೇರಳಕ್ಕೆ ಮಾನ್ಸೂನ್ ಪ್ರವೇಶಿಸುವ ನಿರೀಕ್ಷೆ ಇದೆ. ಹವಾಮಾನ ಇಲಾಖೆ ಈ ಕುರಿತು ಮಾಹಿತಿ ನೀಡಿದೆ.

ಪ್ರತಿ ವರ್ಷ ಹವಾಮಾನ ಇಲಾಖೆ ಮಾನ್ಸೂನ್ ಪ್ರವೇಶದ ದಿನಾಂಕ ಪ್ರಕಟಿಸಲಿದ್ದು, ಅದರಲ್ಲಿ ಸಾಮಾನ್ಯವಾಗಿ 4 ದಿನ ವ್ಯತ್ಯಾಸವಾಗುವ ಸಾಧ್ಯತೆ ಇರಲಿದೆ. 2018ರಲ್ಲಿ ಮೇ 29ರಂದು ಮಾನ್ಸೂನ್ ಪ್ರವೇಶವಾಗಲಿದೆ ಎಂದು ತಿಳಿಸಿತ್ತು. ಅಂದೇ ಪ್ರವೇಶವಾಗಿತ್ತು. 2019ರಲ್ಲಿ ಜೂನ್ 6ರಂದು ಮಾನ್ಸೂನ್ ಪ್ರವೇಶವಾಗುವುದಾಗಿ ತಿಳಿಸಲಾಗಿತ್ತು. ಆದರೆ ಜೂನ್ 8ರಂದು ಪ್ರವೇಶವಾಗಿತ್ತು.

2020ರಲ್ಲಿ ಜೂನ್ 5ರಂದು ಮಾನ್ಸೂನ್ ಪ್ರವೇಶವಾಗುವುದಾಗಿ ತಿಳಿಸಲಾಗಿತ್ತು. ಆದರೆ ಜೂನ್ 1ರಂದೇ ಪ್ರವೇಶವಾಗಿತ್ತು. 2021ರಲ್ಲಿ ಮೇ 31ರಂದು ಮಾನ್ಸೂನ್ ಪ್ರವೇಶವಾಗುವ ಮುನ್ಸೂಚನೆ ನೀಡಲಾಗಿತ್ತು. ಆದರೆ ಜೂನ್ 3ರಂದು ಪ್ರವೇಶವಾಗಿತ್ತು. 2022ರಲ್ಲಿ ಮೇ 27ರಂದು ಮಾನ್ಸೂನ್ ಪ್ರವೇಶವಾಗುವುದಾಗಿ ತಿಳಿಸಲಾಗಿತ್ತು. ಆದರೆ ಮೇ 29ರಂದು ಪ್ರವೇಶವಾಗಿತ್ತು.

ಕಳೆದ 18 ವರ್ಷಗಳಲ್ಲಿ, 2015ಕ್ಕೆ ಹೊರತುಪಡಿಸಿ ಇಲಾಖೆ ನೀಡಿದ್ದ ಮುನ್ಸೂಚನೆ ನಿಖರವಾಗಿತ್ತು ಎಂದು ಹವಾಮಾನ ಇಲಾಖೆ ಹೇಳಿಕೊಂಡಿದೆ.

ಈ ಬಾರಿ ಜೂನ್ 4ರಂದು ಮಾನ್ಸೂನ್ ಪ್ರವೇಶದ ಮುನ್ಸೂಚನೆ ನೀಡಲಾಗಿದ್ದು, 4 ದಿನ ವ್ಯತ್ಯಾಸವಾಗಬಹುದು ಎಂಜೂ ತಿಳಿಸಿದೆ.

https://pragati.taskdun.com/karnatakarainweatherreport/

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button