ಪ್ರಗತಿವಾಹಿನಿ ಸುದ್ದಿ, ಧಾರವಾಡ – ಗುರುವಾರ ಕೇರಳಕ್ಕೆ ಮುಂಗಾರು ಪ್ರವೇಶಿಸಿದೆ. ವಾಡಿಕೆಗಿಂತ 3 ದಿನ ತಡವಾಗಿ ಮುಂಗಾರು ಪ್ರವೇಶವಾಗಿದೆ.
ಮುಂಗಾರು ಮಾರುತವು ಮುಂದುವರಿದು ಮುಂದಿನ 2 ದಿನಗಳಲ್ಲಿ ಕರ್ನಾಟಕದ ಒಳನಾಡು ಹಾಗೂ ದಕ್ಷಿಣ ಒಳನಾಡನ್ನು ಪ್ರವೇಶಿಸುವ ಸಾಧ್ಯತೆ ಇದೆ ಎಂದು ಧಾರವಾಡದ ಉತ್ತರ ಕರ್ನಾಟಕ ಕೃಷಿ ಹವಾಮಾನ ಮತ್ತು ಮುನ್ಸೂಚನಾ ಕೇಂದ್ರ ಹಾಗೂ ಕೃಷಿ ಹವಾಮಾನ ಶಾಸ್ತ್ರ ವಿಭಾಗ ತಿಳಿಸಿದೆ.
ಗಾಳಿಯ ಒತ್ತಡದಲ್ಲಿ ವ್ಯಾತ್ಯಾಸವಾಗಿರುವುದರಿಂದ ಜೂನ್ 3 ಮತ್ತು 4ರಂದು ಉತ್ತರಕರ್ನಾಟಕದ ಬಹುತೇಕ ಭಾಗಗಳಲ್ಲಿ ಮಳೆಯಾಗಲಿದ್ದು, ಕೆಲವೆಡೆ ಭಾರಿ ಮಳೆಯಾಗುವ ಸಾಧ್ಯತೆ ಇದೆ ಎಂದೂ ಕೇಂದ್ರ ತಿಳಿಸಿದೆ.
ಮಳೆಯ ನಂತರದ್ ತೇವಾಂಶದ ಆಧಾರದ ಮೇಲೆ ಬಿತ್ತನೆ ಕೈಗೊಳ್ಳಲು ಸಾಮಗ್ರಿಗಳನ್ನು ಸಿದ್ಧಪಡಿಸಿಟ್ಟುಕೊಳ್ಳುವುದು ಒಳಿತು ಎಂದು ತಿಳಿಸಲಾಗಿದೆ.
ಹೆಚ್ಚಿನ ಮಾಹಿತಿಯನ್ನು ಮೇಲಿನ ಚಿತ್ರದಲ್ಲಿರುವ ನಂಬರ್ ಸಂಪರ್ಕಿಸಿ ಪಡೆಯಬಹುದು.
ಕಡ್ಡಾಯ ವರ್ಗಾವಣೆಗೊಂಡ ಶಿಕ್ಷಕರ ಪರ ಅಧಿಸೂಚನೆ ಪ್ರಕಟ; ಆಕ್ಷೇಪಣೆಗೆ 7 ದಿನ ಅವಕಾಶ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ