ಪ್ರಗತಿವಾಹಿನಿ ಸುದ್ದಿ: ಮುಸ್ಲಿಂ ಮಹಿಳೆ, ಹಿಂದೂ ವ್ಯಕ್ತಿ ಜೊತೆ ಕುಳಿತಿದ್ದಕ್ಕೆ ಮುಸಲ್ಮಾನರ ಹೆಸರು ಹಾಳು ಮಾಡುತ್ತಿದಿಯಾ ಎಂದು ಬೀದರ್‌ನಲ್ಲಿ ಮುಸ್ಲಿಂ ಯುವಕರಿಂದ ನೈತಿಕ ಪೊಲೀಸ್‌ಗಿರಿ ನಡೆದಿದೆ.
ಈ ಘಟನೆಯುವ ಬಸವಕಲ್ಯಾಣದ ಹೊರವಲಯದಲ್ಲಿರೊ ಪಾರ್ಕ್‌ನಲ್ಲಿ ಏ.17 ರಂದು ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಅನೈತಿಕ ಸಂಬಂಧ ಶಂಕೆ ಮಾಡಿರುವ ಯುವಕರ ಗುಂಪು ಹಲ್ಲೆ ನಡೆಸಿದ್ದಾರೆ.
ಮುಸ್ಲಿಂ ಯುವಕರಿಂದ ನೈತಿಕ ಪೊಲೀಸ್ ಗಿರಿ ಹಿನ್ನೆಲೆಯಲ್ಲಿ ಹಲ್ಲೆಗೊಳಗಾಗಿದ್ದ ಆಟೋ ಚಾಲಕ ಅಶೋಕ್ ರೆಡ್ಡಿ ಎಂಬುವವರಿಂದ ದೂರು ದಾಖಲಾಗಿದ್ದು, ಐವರು ಆರೋಪಿಗಳ ವಿರುದ್ಧ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈ ಪ್ರಕಣಕ್ಕೆ ಸಂಭಂದಿಸಿದಂತೆ ಬಸವಕಲ್ಯಾಣ ನಗರ ಪೊಲೀಸರಿಂದ ಸೈಯದ್ ಬಿಲಾಲ್, ತೌಸಿಪ್ ಅಯೂಬ್ ಚಾವುಸ್, ಸೈಯದ್ ಇಬ್ರಾಹಿಂ ಎಂಬ ಮೂವರು ಮುಸ್ಲಿಂ ಯುವಕರ ಬಂಧನ ಮಾಡಲಾಗಿದೆ. ಬಂಧನದಲ್ಲಿ ಇರುವ ಆರೋಪಿಗಳನ್ನು ಬಸವಕಲ್ಯಾಣ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಜೊತೆಗೆ ಖದೀರ್ ಖುರೇಶಿ ಹಾಗೂ ಮಗದೂಮ್ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ. ಆರೋಪಿಗಳ ವಿರುದ್ಧ ಐಪಿಸಿ ಸೆಕ್ಷೆನ್ 323, 324, 354, 504, 506, 34ರಡಿ ಪ್ರಕರಣ ದಾಖಲಾಗಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ