Kannada NewsKarnataka News
ನಿಪ್ಪಾಣಿ ಮತಕ್ಷೇತ್ರದಲ್ಲಿ ಶೈಕ್ಷಣಿಕ ಕ್ಷೇತ್ರಕ್ಕೆ ಹೆಚ್ಚಿನ ಒತ್ತು -ಸಚಿವೆ ಶಶಿಕಲಾ ಜೊಲ್ಲೆ
ಪ್ರಗತಿವಾಹಿನಿ ಸುದ್ದಿ, ಚಿಕ್ಕೋಡಿ– ನಿಪ್ಪಾಣಿ ಮತಕ್ಷೇತ್ರದಲ್ಲಿ ರಸ್ತೆ, ಹೊಲಗದ್ದೆಗಳಿಗೆ ನೀರು, ಕುಡಿಯುವ ನೀರು, ಹಾಸ್ಟೇಲ್, ಸರ್ಕಾರಿ ಕಛೇರಿಗಳು, ಸೇರಿದಂತೆ ಜನರ ಸಮಸ್ಯೆಗೆ ಸ್ಪಂಧಿಸಿ ಸಾರ್ವಜನಿಕ ಕಾರ್ಯಗಳನ್ನು ಕೈಗೊಳ್ಳುವ ಜೊತೆಗೆ ಮಕ್ಕಳಿಗೆ ಒಳ್ಳೆಯ ವಿದ್ಯಾಭ್ಯಾಸ ಸಿಗಲೆಂದು ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಹಂತದಲ್ಲಿ ಸುಧಾರಣೆ ಕೈಗೊಳ್ಳಲಾಗಿದೆ. ಕ್ಷೇತ್ರದಲ್ಲಿ ಶೈಕ್ಷಣಿಕ ಕ್ಷೇತ್ರಕ್ಕೆ ಹೆಚ್ಚಿನ ಆದ್ಯತೆ ನೀಡಲಾಗಿದೆ ಎಂದು ಸಚಿವೆ ಶಶಿಕಲಾ ಜೊಲ್ಲೆ ಹೇಳಿದರು.
ಶನಿವಾರ ಸಮೀಪದ ಅಕ್ಕೋಳ ಗ್ರಾಮದಲ್ಲಿ ಸರಕಾರಿ ತರಬೇತಿ ಸಂಸ್ಥೆಯ ನೂತನ ಕಟ್ಟಡ ಶಿಲ್ಯಾನ್ಯಾಸ ಸಮಾರಂಭಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಕ್ಷೇತ್ರದಲ್ಲಿ ಕೇವಲ ಒಂದೆ ಸರ್ಕಾರಿ ಐಟಿಆಯ ಕಾಲೇಜು ಇತ್ತು. ಕ್ಷೇತ್ರದ ಮಕ್ಕಳಲ್ಲಿ ಕೌಶಲ್ಯ ಅಭಿವೃದ್ಧಿಯಾಗಲಿ ಹಾಗೂ ಉನ್ನತ ಶಿಕ್ಷಣ ಅವಕಾಶ ಸಿಗಲು ಅಕ್ಕೋಳ ಗ್ರಾಮದಲ್ಲಿ 2014 ರಲ್ಲಿ ಸರ್ಕಾರಿ ಆಯಟಿಆಯ ಕಾಲೇಜು ಮಂಜೂರು ಮಾಡಲಾಗಿದೆ. ಸ್ವಂತ ಕಟ್ಟಡ ನಿರ್ಮಿಸಲು 04 ಏಕರೆ 23 ಗುಂಟೆ ಜಮಿನು ಮಂಜೂರಾತಿ ಮಾಡಿಸಿ, ಕಟ್ಟಡಕ್ಕಾಗಿ ನಬಾರ್ಡ ಆರ್.ಐ.ಡಿ.ಎಫ್ -23 ಯೋಜನೆ ಅಡಿ 02 ಕೋಟಿ ಅನುದಾನ ಮಂಜೂರು ಮಾಡಲಾಗಿದೆ. 11 ಕೊಠಡಿಗಳು ನಿರ್ಮಾಣವಾಗಲಿದ್ದು, ವರ್ಷಾಂತ್ಯ ಕಟ್ಟಡ ಕಾಮಗಾರಿ ಪೂರ್ಣಗೊಳ್ಳಲಿದೆ.
ಗಳತಗಾ ಹಾಗೂ ಬೋರಗಾಂವದಲ್ಲಿಯ ಪಿ.ಯು ಕಾಲೇಜುಗಳಗೆ 06 ಹಾಗೂ 02 ಕೋಣೆ ನಿರ್ಮಾಣಕ್ಕೆ ಅನುದಾನ ಮಂಜೂರಾಗಿದೆ. ತಾಲೂಕಿನ ಅನೇಕ ಪ್ರಾಥಮಿಕ ಶಾಲೆಗಳ ಹಳೆ ಕಟ್ಟಡಗಳು ಶಿಥಿಲಾವಸ್ಥೆಯಲ್ಲಿದ್ದವು. 2019-20 ನೇ ಸಾಲಿನಲ್ಲಿ ಸುಮಾರು 58 ಹೊಸ ಕೋಣೆಗಳನ್ನು ನಿರ್ಮಿಸಲಾಗಿದೆ. ಅಂಗನವಾಡಿಯಿಂದ ಉನ್ನತ ಶಿಕ್ಷಣದವರೆಗೆ ಶಿಕ್ಷಣ ಪಡೆಯುತ್ತಿರುವ ಮಕ್ಕಳ ಭವಿಷ್ಯ ರೂಪಿಸುವ ಪ್ರಯತ್ನ ಮಾಡಲಾಗುತ್ತಿದೆ ಎಂದು ಸಚಿವೆ ಶಶಿಕಲಾ ಜೊಲ್ಲೆ ಹೇಳಿದರು.
ಸಂಸದ ಅಣ್ಣಾಸಾಹೇಬ ಜೊಲ್ಲೆ ಮಾತನಾಡಿ, ಪ್ರವಾಹದಿಂದ ನಿಪ್ಪಾಣಿ ತಾಲೂಕಿನಲ್ಲಿ ಅನೇಕ ರಸ್ತೆಗಳು ಹಾಳಾಗಿದ್ದು, ರಸ್ತೆ ರಿಪೇರಿ ಹಾಗು ಡಾಂಬರಿಕರಣಕ್ಕೆ ಕೋಟ್ಯಾಂತರ ರೂಪಾಯಿ ಅನುದಾನ ಮಂಜೂರಾಗಿದ್ದು, ಶೀಘ್ರವೇ ಕಾಮಗಾರಿ ಆರಂಭವಾಗಲಿದೆ. ಸಚಿವೆ ಶಶಿಕಲಾ ಜೊಲ್ಲೆ ಇವರು ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಪ್ರಯತ್ನಿಸುತ್ತಿದ್ದು ಎಲ್ಲರ ಸಹಕಾರ್ಯ ಅಗತ್ಯವಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಜಿ.ಪಂ ಸದಸ್ಯ ಸಿದ್ಧು ನರಾಟೆ, ಹಾಲಸಿದ್ದನಾಥ ಕಾರ್ಖಾನೆ ಅಧ್ಯಕ್ಷ ಚಂದ್ರಕಾಂತ ಕೋಠಿವಾಲೆ, ಉಪಾಧ್ಯಕ್ಷ ಎಂ.ಪಿ.ಪಾಟೀಲ, ನಿಪ್ಪಾಣಿ ನಗರಸಭೆ ಅಧ್ಯಕ್ಷ ಜಯವಂತ ಭಾಟಲೆ, ತಾ.ಪಂ ಸದಸ್ಯೆ ಸುಲಭಾ ಸದಾವರತೆ, ದತ್ತಾತ್ರಯ ವಡಗಾವೆ, ಸದಾಶಿವ ಬುದಿಹಾಳೆ, ಅವಿನಾಶ ಪಾಟೀಲ, ಸಮೀತ ಸಾಸಣೆ, ಆರ್.ಎಂ ಖೋತ, ರಾಮಗೋಂಡ ಪಾಟೀಲ, ಕಲ್ಲಪ್ಪ ನಾಯಿಕ್, ಮನಿಷಾ ರಾಂಗೋಳೆ, ವಿಶ್ವನಾಥ ಕಮತೆ, ನಿರಂಜನ ಕಮತೆ, ಬಾಪುಸಾಬ ಕಟ್ಟಿಕಲ್ಲಿ, ಪ್ರವಿಣ ಶಾಹವೈಭವ ರಾಂಗೊಳೆ, ಜೆ.ಜಿ.ನದಾಫ, ರಾವಸಾಬ ಫರಾಳೆ, ಸುಹಾಸ ಗುಗೆ, ಸೇರಿದಂತೆ ಗ್ರಾಮಸ್ಥರು ಹಾಜರಿದ್ದರು.
ವಿನೋದ ಗೋಕಾವಿ ಸ್ವಾಗತಿಸಿದರು. ಎ.ಎ.ಖಿಲಾರೆ ನಿರೂಪಿಸಿದರು. ಜಿತೇಂದ್ರ ಚಿತಳೆ ವಂದಿಸಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ