Belagavi NewsBelgaum News

*ಒಂಭತ್ತಕ್ಕೂ ಅಧಿಕ ಜನರಿಗೆ ಕಚ್ಚಿದ ಕೋತಿಗಳು*

ಪ್ರಗತಿವಾಹಿನಿ ಸುದ್ದಿ:  ಒಂಭತ್ತಕ್ಕೂ ಅಧಿಕ ಜನರಿಗೆ ಕೋತಿಗಳು ಕಚ್ಚಿದ್ದು, ಕೋತಿಗಳ ಕಾಟಕ್ಕೆ ಜನತೆ ಹೈರಾಣಾಗಿರುವ ಘಟನೆ ಬೆಳಗಾವಿ ಜಿಲ್ಲೆಯ ರಾಮದುರ್ಗ ಪಟ್ಟಣದ ನೇಕಾರ ಪೇಠನಲ್ಲಿ ನಡೆದಿದೆ.‌ 

ಕೋತಿಗಳ ಕಟದಿಂದಾಗಿ ಜನರು ಜೀವ ಭದದಲ್ಲಿಯೇ ಕಾಲಕಳೆಯುವಂತಾಗಿದೆ. ಕೈಯಲ್ಲಿ ಕೋಲು ಹಿಡಿದು ಜನರು ಸಂಚಾರ ಮಾಡುತ್ತಿದ್ದಾರೆ. ಅರಣ್ಯ ಹಾಗೂ ಪುರಸಭೆ ಅಧಿಕಾರಿಗಳ ವಿರುದ್ಧ ಸಾರ್ವಜನಿಕರು ಆಕ್ರೋಶ ಹೊರ ಹಾಕಿದ್ದಾರೆ. ಈ ಕುರಿತು ದೂರು ನೀಡಿದರೂ ಅಧಿಕಾರಿಗಳು ಕ್ರಮ ಕೈಗೊಂಡಿಲ್ಲ ಎಂದು ಜನ ಆರೋಪಿಸಿದ್ದಾರೆ. 

Home add -Advt

Related Articles

Back to top button