Belagavi NewsBelgaum NewsKarnataka News

*ಸೊಳ್ಳೆಗಳಿಂದ ಉಂಟಾಗುವ ರೋಗಗಳ ನಿಯಂತ್ರಣಕ್ಕೆ ಕ್ರಮ: ಜಿಪಂ ಸಿಇಒ ರಾಹುಲ್ ಶಿಂಧೆ*

ಪ್ರಗತಿವಾಹಿನಿ ಸದ್ದಿ: ಮಾನ್ಸೂನ್ ಪ್ರಾರಂಭವಾಗಿರುವದರಿಂದ ಅಲ್ಲಲ್ಲಿ ನೀರು ನಿಂತು ಸೊಳ್ಳೆಗಳು ಉತ್ಪನ್ನವಾಗಿ ಕೀಟಜನ್ಯ ಸಾಂಕ್ರಾಮಿಕ ರೋಗಗಳಾದ ಡೆಂಗೀ, ಚಿಕುನ್ ಗುನ್ಯಾ, ಮಲೇರಿಯಾ ಕಾಯಿಲೆಗಳು ಉಲ್ಬಣಗೊಳ್ಳಬುಹುದಾಗಿದ್ದು, ಲಾರ್ವಾ ಸಮೀಕ್ಷೆಯನ್ನು ಕೈಕೊಂಡು ಸೊಳ್ಳೆ ಉತ್ಪನ್ನ ತಾಣಗಳನ್ನು ನಾಶಪಡಿಸಲು ಸಕ್ರೀಯ ಸಮೀಕ್ಷೆ ಕೈಕೊಳ್ಳಬೇಕೆಂದು ಜಿಪಂ ಸಿಇಒ ರಾಹುಲ್ ಶಿಂಧೆ ತಿಳಿಸಿದರು. 

ನಗರದ ಜಿಲ್ಲಾ ಪಂಚಾಯತ  ಕಚೇರಿಯ ಸಭಾ ಭವನದಲ್ಲಿ ಸೋಮವಾರ (ಜೂ-1) ರಾಷ್ಟ್ರೀಯ ಆರೋಗ್ಯ ಕಾರ್ಯಕ್ರಮಗಳ ಪ್ರಗತಿ ಪರಿಶೀಲನೆ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. 

ಶಾಲೆಗಳು ಪ್ರಾರಂಭವಾಗಿರುವುದರಿ0ದ ರಾಷ್ಟ್ರೀಯ ಬಾಲಸ್ವಾಸ್ಥ್ಯ ಕಾರ್ಯಕ್ರಮದಡಿ ಕಾರ್ಯನಿರ್ವಹಿಸುತ್ತಿರುವ ಆರೋಗ್ಯ ತಪಾಸಣಾ ಮಾಡುವ ವೈದ್ಯಕೀಯ ತಂಡಗಳು ಸರಿಯಾಗಿ ಕಾರ್ಯನಿರ್ವಹಣೆ ಮಾಡಿ ಪ್ರಾರಂಭದ ಹಂತದಲ್ಲಿ ಮಕ್ಕಳಲ್ಲಿರುವ ನ್ಯೂನ್ಯತೆಗಳು ಕಂಡು ಹಿಡಿದು ಚಿಕಿತ್ಸೆ ನೀಡಿಲು ತಿಳಿಸಿದರು. 

ದೃಷ್ಠಿದೋಷ ಇರುವ ಮಕ್ಕಳಿಗೆ ಉಚಿತ ಕನ್ನಡಕಗಳನ್ನು ನೀಡಲು ಟೆಂಡರ ಹರಾಜು ಪ್ರಕ್ರಿಯೆಯನ್ನು ಪೂರ್ಣಗೊಳಿಸಿಕೊಂಡು ಕನ್ನಡಕಗಳನ್ನು ವಿತರಿಸಲು ತಿಳಿಸಿದರು. ಅದರಂತೆ ಶ್ರವಣ ದೋಷವಿರುವ ಮಕ್ಕಳಿಗೆ ಶ್ರವಣದೋಷ ಸಾಧನಗಳನ್ನು ಸಹ ವಿತರಿಸಲು ತಿಳಿಸಿದರು. ಆರೋಗ್ಯ ಇಲಾಖೆಯ ಅಧಿಕಾರಿಗಳು ಕ್ಷೇತ್ರಭೇಟಿ ಸಮಯದಲ್ಲಿ ಆರೋಗ್ಯ ಸಂಬಂಧಿ ನ್ಯೂನ್ಯತೆಗಳು ಕಂಡು ಬಂದ ಮಕ್ಕಳ ಪಾಲಕರ ಸಭೆಗಳನ್ನು ಆಯಾ ಶಾಲೆಗಳಲ್ಲಿ ಆಯೋಜಿಸಿ ಸೇವೆಯನ್ನು ಒದಗಿಸಲು ತಿಳಿಸಿದರು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳ ಕಚೇರಿ ಹಾಗೂ ಅವರ ಅಧಿನದಲ್ಲಿರುವ ಆರೋಗ್ಯ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ವಾಹನಗಳ, ಚಾಲಕರ ಮತ್ತು ಅಂಬ್ಯುಲನ್ಸ ವಿವರಗಳ ಮಾಹಿತಿಯನ್ನು ಜರೂರ ಜಿಲ್ಲಾ ಪಂಚಾಯತ ಸಲ್ಲಿಸಲು ತಿಳಿಸಿದರು. ಹೊರಗುತ್ತಿಗೆ ಆಧಾರದ ಮೇಲೆ ತಗೆದುಕೊಳ್ಳುವ ಗ್ರೂಪ್-ಡಿ ಮತ್ತು ಗಣಕಯಂತ್ರ ಸಹಾಯಕರನ್ನು 33% ಮಹಿಳಾ ರೋಸ್ಟರ ಆಧಾರದಲ್ಲಿ ಭರ್ತಿ ಮಾಡಿಕೊಳ್ಳುವುದು. ಹಿಂದೆ ಕಾರ್ಯನಿರ್ವಹಿಸುತ್ತಿರುವವರನ್ನು ಅವರ ಕೆಲಸದ ಆಧಾರದ ಮೇಲೆ ಮುಂದುವರೆಸಲು ತಿಳಿಸಿದರು. 

ಜಿಲ್ಲಾ ಪ್ರಯೋಗಾಲಯದಲ್ಲಿ ನೀರಿನ ಮಾದರಿಗಳು ತಪಾಸಣೆಯ ನಂತರ ಅತೃಪ್ತಿಕರ ಕಂಡು ಬಂದಲ್ಲಿ ಆ ನೀರಿನ ಮೂಲಗಳ ವಿವರವನ್ನು ಸಂಬAಧಿಸಿದ ಗ್ರಾಮ ಪಂಚಾಯತಿಗಳಿಗೆ ಸಲ್ಲಿಸಿ ಕುಡಿಯಲು ಯೋಗ್ಯವಲ್ಲವೆಂದು ಆ ನೀರಿನ ಮೂಲಗಳ ಹತ್ತಿರ ಬೋರ್ಡ ಹಾಕಿಸಲು ಕ್ರಮ ಕೈಕೊಳ್ಳುವಂತೆ ತಿಳಿಸಿದರು.

ತಂಬಾಕು ನಿಯಂತ್ರಣ ಕಾಯ್ದೆಯಡಿ ಶಾಲಾ ಕಾಲೇಜುಗಳು, ಕಚೇರಿಗಳು ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ತಂಬಾಕು ಹಾಗೂ ತಂಬಾಕು ಉತ್ಪನಗಳ ಮಾರಾಟ ನಿಷೇದದ ಫಲಕ ಅಳವಡಿಸುವುದು ಜಂಟಿ ಸಮಿತಿಗಳಿಂದ ಈ ಪ್ರದೇಶದಲ್ಲಿ ಮಾರಾಟ ಮಾಡುವವರ ವಿರುದ್ಧ ದಾಳಿ ಮಾಡಿ ಪ್ರಕರಣ ದಾಖಲಿಸಬೇಕೆ ಎಂದು ಸಿ.ಇ.ಒ ತಿಳಿಸಿದರು. 

ರಕ್ತದಾನ ಶಿಬಿರಗಳನ್ನು ಏರ್ಪಡಿಸುವ ಎಲ್ಲ ರಕ್ತನಿಧಿಯವರು ಜಿಲ್ಲಾ ಆಸ್ಪತ್ರೆಯಲ್ಲಿರುವ ರಕ್ತ ನಿಧಿಗೆ ಶೇಖರಣೆಯಾದ 25% ರಕ್ತಗಳನ್ನು ನೀಡಲು ಸೂಚಿಸಿದರು.

ಈ ಸಂದರ್ಭದಲ್ಲಿ, ಅಪರ ಜಿಲ್ಲಾ ಆರೋಗ್ಯ ಅಧಿಕಾರಿ ಎಸ್.ಎಸ್. ಗಡೇದ, ಜಿಲ್ಲೆಯ ಕಾರ್ಯಕ್ರಮ ಅನುಷ್ಠಾನ ಅಧಿಕಾರಿಗಳು, ತಾಲೂಕಾ ಆರೋಗ್ಯಾಧಿಕಾರಿಗಳು, ಮುಖ್ಯ ವೈದ್ಯಾಧಿಕಾರಿಗಳು ಹಾಗೂ ಸಾರ್ವಜನಿಕ ಆಸ್ಪತ್ರೆಗಳು ಹಾಗೂ ಎನ್.ಹೆಚ್.ಎಂ ಸಿಬ್ಬಂದಿಗಳು ಉಪಸ್ಥಿತರಿದ್ದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button