ಪ್ರಗತಿವಾಹಿನಿ ಸುದ್ದಿ, ಬೆಳಗಾವಿ : ಕಾಂಗ್ರೆಸ್ ಅಧ್ಯಕ್ಷರ ಬದಲಾವಣೆಗೆ ಸತೀಶ್ ಜಾರಕಿಹೊಳಿ ಪಟ್ಟು, ಬಿಜೆಪಿ ಅಧ್ಯಕ್ಷರ ಬದಲಾವಣೆಗೆ ರಮೇಶ ಜಾರಕಿಹೊಳಿ ಪಟ್ಟು ಎಂದು ಪ್ರಗತಿವಾಹಿನಿ ಬುಧವಾರ ಮಧ್ಯಾಹ್ನ ಪ್ರಕಟಿಸಿದ್ದ ವರದಿಯನ್ನು ಗುರುವಾರ ರಾಜ್ಯದ ಬಹುತೇಕ ಮುದ್ರಣ ಮತ್ತು ಟಿವಿ ಮಾಧ್ಯಮಗಳು ವಿಸ್ತರಿಸಿವೆ.
ಬುಧವಾರ ಬೆಳಗ್ಗೆ ಬೆಂಗಳೂರಿನಲ್ಲಿ ಸತೀಶ್ ಜಾರಕಿಹೊಳಿ, ಬೆಳಗಾವಿಯಲ್ಲಿ ರಮೇಶ ಜಾರಕಿಹೊಳಿ ಪತ್ರಿಕಾಗೋಷ್ಠಿ ನಡೆಸಿ ತಮ್ಮ ತಮ್ಮ ಪಕ್ಷದ ಅಧ್ಯಕ್ಷರ ಬದಲಾವಣೆ ವಿಷಯ ಪ್ರಸ್ತಾಪಿಸಿದ್ದರು. ಇಬ್ಬರದ್ದೂ ಒಂದೇ ಬೇಡಿಕೆಯಾಗಿತ್ತು, ಅವರವರ ಪಕ್ಷದ ರಾಜ್ಯಾಧ್ಯಕ್ಷರನ್ನು ಬದಲಿಸಬೇಕೆನ್ನುವುದು. ಎರಡೂ ಪತ್ರಿಕಾಗೋಷ್ಠಿಯನ್ನು ಸಮ್ಮಿಳಿತಗೊಳಿಸಿ ಮೊಟ್ಟ ಮೊದಲಿಗೆ ಹೊಸ ಆ್ಯಂಗಲ್ ನೀಡಿ ಪ್ರಗತಿವಾಹಿನಿ ಸುದ್ದಿ ಪ್ರಕಟಿಸಿತ್ತು.
ಗುರುವಾರ ಬೆಳಗ್ಗೆ ಪ್ರಕಟಗೊಂಡ ಅನೇಕ ಮುದ್ರಣ ಮಾಧ್ಯಮಗಳು ಸುದ್ದಿಗೆ ಅದೇ ಆ್ಯಂಗಲ್ ನೀಡಿದವು. ಅಲ್ಲದೆ, ಗುರುವಾರ ಇಡೀ ದಿನ ಬಹುತೇಕ ಟಿವಿ ಮಾಧ್ಯಗಳೂ ಅದೇ ಆ್ಯಂಗಲ್ ನಲ್ಲಿ ಸುದ್ದಿ ವಿಸ್ತರಿಸಿದವು. ಇದನ್ನು ಉಲ್ಲೇಖಿಸಿ ಅನೇಕ ರಾಜಕಾರಣಿಗಳು, ಮಾಧ್ಯಮ ಕ್ಷೇತ್ರದ ಹಿರಿಯರು ಕರೆ ಮಾಡಿ ಪ್ರಗತಿವಾಹಿನಿ ಸುದ್ದಿಗೆ ನೀಡಿದ ಆ್ಯಂಗಲ್ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ