CrimeKannada NewsKarnataka NewsNationalTravel

*ಡಿವೈಡರ್‌ಗೆ ಕಾರ್ ಡಿಕ್ಕಿ: ತಾಯಿ-ಮಗಳು ದುರ್ಮರಣ*

ಪ್ರಗತಿವಾಹಿನಿ ಸುದ್ದಿ: ಕಾರೊಂದು ನಿಯಂತ್ರಣ ಕಳೆದುಕೊಂಡು ಡಿವೈಡರ್‌ಗೆ ಡಿಕ್ಕಿ ಹೊಡೆದ ಪರಿಣಾಮ ತಾಯಿ ಮಗಳು ಸಾವನ್ನಪ್ಪಿರುವ ಘಟನೆ ನಡೆದಿದೆ.

ತುಮಕೂರಿನ ರಾಷ್ಟ್ರೀಯ ಹೆದ್ದಾರಿ 75ರ ಉರ್ಕೇಹಳ್ಳಿ ಜಂಕ್ಷನ್ ಬಳಿ ಈ ಅಪಘಾತ ಸಂಭವಿಸಿದೆ.  ಜಯಮಾಲಾ (60) ಹಾಗೂ ಅವರ ಪುತ್ರಿ ರಾಜೇಶ್ವರಿ (40) ಮೃತಪಟ್ಟಿದ್ದಾರೆ.

Home add -Advt

ಈ ಅಪಘಾತದಲ್ಲಿ ಮೃತಪಟ್ಟ ಜಯಮಾಲಾ ಹಾಗೂ ಪುತ್ರಿ ರಾಜೇಶ್ವರಿ ಮೂಲತಃ ರಾಯಚೂರಿನವರಾಗಿದ್ದು ಬೆಂಗಳೂರಿನಲ್ಲಿ ವಾಸವಿದ್ದರು. ಮಗ ಪ್ರೀತಂನನ್ನು ಶ್ರವಣಬೆಳಗೊಳದ ವಸತಿ ಶಾಲೆಗೆ ದಾಖಲಿಸಲು ಪ್ರಯಾಣಿಸುತ್ತಿದ್ದಾಗ ಈ ಅಪಘಾತ ಸಂಭವಿಸಿದೆ.

ಇನ್ನು ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡಿರುವ ಬಾಲಕ ಪ್ರೀತಂನನ್ನು ಸ್ಥಳೀಯರು ತಕ್ಷಣವೇ ಕುಣಿಗಲ್‌ನ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿದ್ದಾರೆ. 

ಮೃತ ಮಹಿಳೆಯರ ಮೃತದೇಹಗಳನ್ನು ಸಹ ಅದೇ ಆಸ್ಪತ್ರೆಯ ಶವಪರೀಕ್ಷಾ ಕೇಂದ್ರಕ್ಕೆ ಸಾಗಿಸಲಾಗಿದೆ. ಸದ್ಯ ಕುಣಿಗಲ್ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.‌

Related Articles

Back to top button