
ಪ್ರಗತಿವಾಹಿನಿ ಸುದ್ದಿ: ಮೂರು ವರ್ಷದ ಮಗಳ ಮುಂದೆಯೇ ತಂದೆ-ತಾಯಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಹಾವೇರಿ ತಾಲೂಕಿನ ಬೆಳವಿಗಿ ಗ್ರಾಮದ ಅಂಬೇಡ್ಕರ್ ನಗರದಲ್ಲಿ ನಡೆದಿದೆ.
ಹನುಮಂತ ಹೊನ್ನಪ್ಪನವರ (32) ಹಾಗೂ ಪತ್ನಿ ಸವಿತಾ ಹೊನ್ನಪ್ಪನವರ (26) ಆತ್ಮಹತ್ಯೆಗೆ ಶರನಾದ ದಂಪತಿ. ತಮ್ಮ 3 ವರ್ಷದ ಮಗಳು ಚೇತಾನಳ ಮುಂದೆಯೆ ನೇಣಿಗೆ ಕೊರಳೊಡ್ಡಿದ್ದಾರೆ.
ತಡರಾತ್ರಿ ಮಗು ವಿಪರೀತ ಅಳುತ್ತಿತ್ತು. ಮಗು ಅಳುವುದನ್ನು ಕೇಳಿ ಅಕ್ಕಪಕ್ಕದ ಮನೆಯವರು ಎಚ್ಚರಗೊಂಡಿದ್ದಾರೆ. ಮನೆಬಳಿ ಬಂದು ಕರೆದರೆ ಯಾರೂ ಬಾಗಿಲು ತೆರೆದಿಲ್ಲ. ಆದರೆ ಮಗು ಮಾತ್ರ ಅಳುತ್ತಲೇ ಇತ್ತು. ಅನುಮನಗೊಂಡ ನೆರೆಹೊರೆಯವರು ಮನೆಯ ಹೆಂಚು ತೆಗೆದು ನೋಡಿದ್ದಾರೆ. ಈ ವೇಳೆ ಮಗುವಿನ ಮುಂದೆಯೇ ತಂದೆ-ತಾಯಿ ನೇಣುಬಿಗಿದ ಸ್ಥಿತಿಯಲ್ಲಿಇ ಸಾವನ್ನಪ್ಪಿರುವುದು ಕಂಡುಬಂದಿದೆ.
ಕೆಳಗಿಳಿದು ಮಗುವನ್ನು ಎತ್ತಿಕೊಂಡು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ದಂಪತಿ ಆತ್ಮಹತ್ಯೆಗೆ ಕಾರಣ ತಿಳಿದುಬಂದಿಲ್ಲ. ಗುತ್ತಲ ಠಾಣೆ ಪೊಲೀಸರು ಸ್ಥಳಕ್ಕಾಗಮಿಸಿ ತನಿಖೆ ನಡೆಸಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ