Belagavi NewsBelgaum News

*ವಿವಿಧೆಡೆ ಅಂಗನವಾಡಿ ಕಟ್ಟಡ ನಿರ್ಮಾಣಕ್ಕೆ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಭೂಮಿ ಪೂಜೆ*

ಪ್ರಗತಿವಾಹಿನಿ ಸುದ್ದಿ: ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಅವರು ಶುಕ್ರವಾರ ಸಂಜೆ ಕ್ಷೇತ್ರದ 5 ಗ್ರಾಮಗಳಲ್ಲಿ ಅಂಗನವಾಡಿಯ ನೂತನ ಕಟ್ಟಡ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಚಾಲನೆ ನೀಡಿದರು.

ಬೆಳಗಾವಿ ಗ್ರಾಮೀಣ ಕ್ಷೇತ್ರದ ನಿಲಜಿ, ಮುತಗಾ, ಪಂತಬಾಳೇಕುಂದ್ರಿ, ಮಾವಿನಕಟ್ಟಿ ಹಾಗೂ ಶೆಗಣಮಟ್ಟಿ ಗ್ರಾಮಗಳಲ್ಲಿ ನೂತನ ಅಂಗನವಾಡಿ ಕಟ್ಟಡಗಳು ನಿರ್ಮಾಣಗೊಳ್ಳಲಿವೆ. ಇದರ ಜೊತೆಗೆ ಪಂತ ಬಾಳೆಕುಂದ್ರಿಯಲ್ಲಿ ರಾಜಮಾರ್ಗ ರಸ್ತೆ ನಿರ್ಮಾಣದ ಕಾಮಗಾರಿಗೆ ಸಹ ಭೂಮಿ ಪೂಜೆ ನೆರವೇರಿಸಿದರು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕ ನಾಗರಾಜ ಉಪಸ್ಥಿತರಿದ್ದರು.
ಇಡೀ ಕ್ಷೇತ್ರದಲ್ಲಿ ವರ್ಷದ 365 ದಿನವೂ ಒಂದಿಲ್ಲೊಂದು ಅಭಿವೃದ್ಧಿ ಕಾಮಗಾರಿಗಳು ನಡೆಯುತ್ತಲೇ ಇರುತ್ತವೆ. ಗ್ರಾಮೀಣ ಕ್ಷೇತ್ರದಲ್ಲಿ ಅಭಿವೃದ್ಧಿ ಎಂದಿಗೂ ನಿಲ್ಲುವುದಿಲ್ಲ. ಇಡೀ ರಾಜ್ಯದಲ್ಲಿ ಮಾದರಿಯಾಗಿ ಕ್ಷೇತ್ರವನ್ನು ನಿಲ್ಲಿಸುವುದೇ ನನ್ನ ಗುರಿ. ಅದರಂತೆ ನಿಮ್ಮೆಲ್ಲರ ಸಹಕಾರವಿರಲಿ ಎಂದು ಲಕ್ಷ್ಮೀ ಹೆಬ್ಬಾಳಕರ್ ಹೇಳಿದರು.

Home add -Advt

ನೀಲಜಿಯಲ್ಲಿ ಪೂಜೆಯ ಸಂದರ್ಭದಲ್ಲಿ ಬಾಲಕೃಷ್ಣ ಕೋಲಕಾರ, ಶುಭಂ ಕೋಲಕಾರ್, ರಾಘವೇಂದ್ರ ಕೋಲಕಾರ, ದೀಪಕ್ ಕೇತ್ಕರ್, ವೀಣಾ ಕೋಲಕಾರ್, ವಿಶಾಲ ಪಾಟೀಲ, ಓಂಕಾರ್ ಕೋಲಕಾರ್, ಸಂದೀಪ್ ಮೊದಗೇಕರ್, ಲಖನ್ ಮೊದಗೇಕರ್, ಪ್ರವೀಣ ಪಾಟೀಲ, ಪ್ರಸಾದ ಮುಕುಂದ, ರೋಹಿತ್ ಪಾಟೀಲ, ಓಂಕಾರ್ ಮೊದಗೇಕರ್, ರುಷಿಕೇಶ್ ಮೊದಗೇಕರ್, ಪರಶುರಾಮ ಪಾಟೀಲ ಮೊದಲಾದವರು ಉಪಸ್ಥಿತರಿದ್ದರು.

ಮುತಗಾ ಗ್ರಾಮದಲ್ಲಿ ಸ್ನೇಹಲ್ ಪೂಜೇರಿ, ಗಜು ಕಣಬರ್ಕರ್, ಪಿಂಟು ಮಲ್ಲವ್ವಗೋಳ, ಮಾರುತಿ‌ ಪೂಜೇರಿ, ರಾಯಣ್ಣ ಮಲ್ಲುಗೋಳ, ಶ್ಯಾಮ್ ಮುತಗೇಕರ್, ರಾಜು ಪಾಟೀಲ, ಪ್ರಭಾಕರ್ ತಳವಾರ್, ರಾಕೇಶ್ ಪಾಟೀಲ, ಭೀಮಾ ಮಲ್ಲುಗೋಳ ಉಪಸ್ಥಿತರಿದ್ದರು.

ಪಂತ ಬಾಳೇಕುಂದ್ರಿಯ ಪೂಜೆ ಸಂದರ್ಭದಲ್ಲಿ, ಗ್ರಾಮ ಪಂಚಾಯತ್ ಅಧ್ಯಕ್ಷರಾದ ಗುಲಾಬಿ ಕೋಲಕಾರ, ಉಪಾಧ್ಯಕ್ಷರಾದ ಬಿಬಿ ಹನೀಫಾ, ಮೈನೂದ್ದೀನ ಅಗಸಿಮನಿ, ಇಸ್ಮಾಯಿಲ್ ಮಕಾನದಾರ, ಮೊಹಮ್ಮದ್ ಜಮಾದಾರ, ಹೊನ್ನಗೌಡ ಪಾಟೀಲ, ದತ್ತು ಕೋಲಕಾರ, ಪಾರ್ವತಿ ತಳವಾರ, ರಿಯಾಜ್ ಮುಲ್ಲಾ, ಜಾವೇದ್ ಮುಲ್ಲಾ, ರಾಜು ಕರಲಿಂಗನವರ, ವಿನಯ ಪಾಟೀಲ, ಪ್ರವೀಣ ಪಾಟೀಲ, ಸುರೇಶ ಕಾಳೋಜಿ, ತಬಸುಮ್ ಮುಲ್ಲಾ, ಅಂಗನವಾಡಿ ಕಾರ್ಯಕರ್ತೆಯರು ಉಪಸ್ಥಿತರಿದ್ದರು.

ಮಾವಿನಕಟ್ಟಿ ಗ್ರಾಮದಲ್ಲಿ ಉಳವಪ್ಪ ಮಲ್ಲಣ್ಣವರ, ಚನ್ನಪ್ಪ ಹಿರೇಹೊಳಿ, ನಾಗರಾಜ ಗಣಿಕೊಪ್ಪ, ಬಸವಣ್ಣೆಪ್ಪ ಅರಗಂಜಿ, ನಾಗರಾಜ ಅರಗಂಜಿ, ಬಸವರಾಜ ಪಾಟೀಲ ಮುಂತಾದವರು ಉಪಸ್ಥಿತರಿದ್ದರು.

ಶೆಗಣಮಟ್ಟಿ ಗ್ರಾಮದಲ್ಲಿ ವಿಶ್ವನಾಥ ಕೆ, ಮಹಾವೀರ ಪಾಟೀಲ, ಪಾರಿಶ್ ಪಾಟೀಲ, ಗುಂಡು ದೇಸಾಯಿ, ಹನಮಂತ ಪಾಟೀಲ, ಸಂತೋಷ ಅಷ್ಟೇಕರ್, ರಫೀಕ್ ಸನದಿ, ರಸೂಲ್ ಸನದಿ, ಬಾಳೇಶ್ ಗೋಕಾಂವಿ, ಮಹಾದೇವ್ ಲೋಕೂರ್, ಸಾತು ಸನದಿ, ರಾಜು ಪಾಟೀಲ, ಬಾಳೇಶ್ ಪಾಟೀಲ, ಅಡಿವೆಪ್ಪ ಪಾಟೀಲ, ತೌಫಿಕ್ ಸನದಿ, ಅಶ್ವಿನಿ ಹಲಗಿಮರಡಿ, ಗುಲಾಬಿ ಪಾಟೀಲ, ಲಕ್ಷ್ಮೀ ಅಷ್ಟೇಕರ್, ಅಂಗನವಾಡಿ ಕಾರ್ಯಕರ್ತೆಯರು ಮುಂತಾದವರು ಉಪಸ್ಥಿತರಿದ್ದರು.

Related Articles

Back to top button