
ಪ್ರಗತಿವಾಹಿನಿ ಸುದ್ದಿ: ಇಬ್ಬರು ಮುದ್ದಾನದ ಮಕ್ಕಳೊಂದಿಗೆ ತಾಯಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.
ಕೊಪ್ಪಳದ ಕುಕನೂರು ತಾಲೂಕಿನ ಬೆಣಕಲ್ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಗ್ರಾಮದ ಲಕ್ಷ್ಮವ್ವ ಹನುಮಪ್ಪ ಭಜಂತ್ರಿ (30) ಮಕ್ಕಳಾದ ರಮೇಶ (4) ಹಾಗೂ ಜಾನ್ವಿ (2) ಶವಗಳು ಮನಯಲ್ಲೇ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿವೆ.
ಮಹಿಳೆ ತನ್ನಿಬ್ಬರು ಮಕ್ಕಳಿಗೆ ಮೊದಲು ನೇಣು ಹಾಕಿ ನಂತರ ತಾನೂ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಸ್ಥಳೀಯರು ಹೇಳುತ್ತಿದ್ದಾರೆ.
ಸಾವಿಗೆ ಕಾರಣ ತಿಳಿದು ಬಂದಿಲ್ಲ. ಘಟನಾ ಸ್ಥಳಕ್ಕೆ ಕೊಪ್ಪಳ ಎಸ್ ಪಿ ಡಾ.ರಾಮ್ ಎಲ್ ಅರಸಿದ್ದಿ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.




