Kannada NewsKarnataka NewsLatest

*ತಾಯಿಯ ಖಾಸಗಿ ಫೋಟೊಗಳನ್ನು ತನ್ನ ಪ್ರಿಯಕರನಿಗೆ ಕಳುಹಿಸಿದ ಮಗಳು: ಶಾಕ್ ಆದ ತಾಯಿ ಮಾಡಿದ್ದೇನು?*

ಪ್ರಗತಿವಾಹಿನಿ ಸುದ್ದಿ: ಮಗಳೊಬ್ಬಳು ತನ್ನ ತಾಯಿಯ ಖಾಸಗಿ ಫೋಟೋಗಳನ್ನು ತನ್ನ ಪ್ರಿಯಕರನಿಗೆ ಕಳುಹಿಸಿರುವ ಘಟನೆ ಬೆಳಕಿಗೆ ಬಂದಿದೆ.

ಮಗಳ ಕೃತ್ಯಕ್ಕೆ ಶಾಕ್ ಆದ ತಾಯಿ ಪೊಲೀಸ್ ಠಾಣೆಗೆ ದೂರು ನೀಡಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. 23 ವರ್ಷದ ಮಗಳು ತನ್ನ ಪ್ರಿಯಕರನಿಗೆ ತನ್ನ ತಾಯಿ ಹಾಗೂ ಚಿಕ್ಕಮ್ಮನ ಖಾಸಗಿ ಫೋಟೋ, ವಿಡಿಯೋಗಳನ್ನು ಕಳುಹಿಸಿದ್ದಾಳೆ.

ತನ್ನ ವಿದ್ಯಾಭ್ಯಾಸಕ್ಕೆ, ಆನ್ ಲೈನ್ ಕ್ಲಾಸ್ ಗಾಗಿ ಮೊಬೈಲ್ ಬೇಕೆಂದು ಮಗಳು ಪೋಷಕರ ಬಳಿ ಮೊಬೈಲ್ ಪಡೆದಿದ್ದಳು. ತಿಂಗಳ ಹಿಂದೆ ಮಗಳು ಅಪರುಚಿತ ಯುವಕನೊಬ್ಬನ ಜೊತೆ ಮಾತನಾಡುವಾಗ ಸಿಕ್ಕಿಬಿದ್ದಿದ್ದಳು. ಈ ವೇಳೆ ತಾಯಿ ಪ್ರಶ್ನಿಸಿದಾಗ ಮೊಬೈಲ್, ಪಾಸ್ ವರ್ಡ್ ಕೊಡದೇ ತಪ್ಪಿಸಿಕೊಂಡಿದ್ದಳು.

ಇತ್ತೀಚೆಗೆ ತಾಯಿ ಈ ವಿಷಯವನ್ನು ತಂದೆಗೆ ತಿಳಿಸಿದ್ದರು. ಅಲ್ಲದೇ ಮೊಬೈಲ್ ಪಾಸ್ ವರ್ಡನ್ನೂ ಪಡೆದಿದ್ದರು. ಹೀಗೆ ಮಗಳ ಮೊಬೈಲ್ ಪಾಸ್ ವರ್ಡ್ ಪಡೆದು ಮೊಬೈಲ್ ಪರಿಶೀಲಿಸಿದಾಗ ಮಗಳ ಕೃತ್ಯಕಂಡು ತಾಯಿ ಆಘಾತಗೊಂಡಿದ್ದಾರೆ. ತಾಯಿ, ಆಂಟಿಯ ಖಾಸಗಿ ಫೋಟೋಗಳು, ಇನ್ನೂ ಇತರ ಸಂಬಂಧಿಕಗಳ ಖಾಸಗಿ ಫೋಟೋಗಳನ್ನು ಮಗಳು ಆಕೆಯ ಪ್ರಿಯತಮನಿಗೆ ಕಳುಹಿಸಿದ್ದಾಳೆ. ಮಗಳು ಯಾಕೆ ಹೀಗೆ ಮಾಡುತ್ತಿದ್ದಾಳೆ? ಫೋಟೋಗಳನ್ನು ಆಕೆಯ ಪ್ರಿಯತಮ ದುರುಪಯೋಗ ಪಡಿಸಿಕೊಳ್ಳುತ್ತಿರುವ ಶಂಕೆ ವ್ಯಕ್ತವಾಗಿದೆ.

Home add -Advt

ಈ ಹಿನ್ನೆಲೆಯಲ್ಲಿ ತಾಯಿ ತನ್ನ ಮಗಳು ಹಾಗೂ ಆಕೆಯ ಪ್ರಿಯಕರನ ವಿರುದ್ಧ ಬೆಂಗಳೂರಿನ ಬ್ಯಾಟರಾಯನಪುರ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

Related Articles

Back to top button