CrimeKannada NewsNational

*ಫಾಲ್ಸ್ ಬಳಿ ರೀಲ್ಸ್: ಕ್ಯಾಮೆರಾ ಮುಂದೆಯೇ ಮುಳಗಿದ ಮೂವರು*

ಪ್ರಗತಿವಾಹಿನಿ ಸುದ್ದಿ: ಜಲಪಾತದ ಬಳಿ ರೀಲ್ಸ್ ಮಾಡಲು ಹೋಗಿದ್ದ ಮೂವರು ಯುವತಿಯರು ಕ್ಯಾಮೆರಾ ಮುಂದೆಯೇ ಮುಳುಗಿ ಸಾವನ್ನಪ್ಪಿರುವ ದುರ್ಘಟನೆ ನಡೆದಿದೆ.

ಆಂಧ್ರಪ್ರದೇಶದಲ್ಲಿ ಈ ಘಟನೆ ನಡೆದಿದೆ. ಮೃತರನ್ನು ತ್ರಿಶಾ (17),  ರತ್ನ ಕುಮಾರಿ (17) ಮತ್ತು  ಪವಿತ್ರಾ (16) ಎಂದು ಗುರುತಿಸಲಾಗಿದೆ.

ಅಲ್ಲೂರಿ ಸೀತಾರಾಮ ರಾಜು ಜಿಲ್ಲೆಯ ಮುಲ್ಲುಂಗುಮ್ಮಿ ಜಲಪಾತದಲ್ಲಿ ವಿಡಿಯೋ ಮಾಡಲು ಹೋದ ಮೂವರು ಯುವತಿಯರು ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ. ಇತರ ಇಬ್ಬರು ಹುಡುಗಿಯರು ಸುರಕ್ಷಿತವಾಗಿ ಪಾರಾಗಿದ್ದಾರೆ.

ಆರಂಭದಲ್ಲಿ ನೀರಿನ ದಡದಲ್ಲೇ ಇದ್ದ ಯುವತಿಯರು ನೋಡ ನೋಡುತ್ತಲೇ ಮುಂದಕ್ಕೆ ಹೋಗಿದ್ದಾರೆ. ಈ ವೇಳೆ ಆಳ ಹೆಚ್ಚಾಗಿದ್ದು, ಮೊದಲು ಇಬ್ಬರು ಯುವತಿಯರು ಮುಳುಗಿದ್ದಾರೆ. ಬಳಿಕ ಹೊರಬರಲಾಗದೇ ಮೂವರು ಸಾವನ್ನಪ್ಪಿದ್ದಾರೆ.

Related Articles

Back to top button