LatestUncategorized

*ಪುಟ್ಟ ಮಕ್ಕಳಿಗೆ ವಿಷವುಣಿಸಿ ತಾಯಿ ಆತ್ಮಹತ್ಯೆ*

ಪ್ರಗತಿವಾಹಿನಿ ಸುದ್ದಿ; ಬೀದರ್: ಇಬ್ಬರು ಪುಟ್ಟ ಕಂದಮ್ಮಗಳಿಗೆ ವಿಷವುಣಿಸಿ ತಾನೂ ವಿಷಸೇವಿಸಿ ತಾಯಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಹೃದಯ ವಿದ್ರಾವಕ ಘಟನೆ ಬೀದರ್ ಜಿಲ್ಲೆಯ ಭಾಲ್ಕಿ ಯಲ್ಲಿ ನಡೆದಿದೆ.

ಭಾಲ್ಕಿ ತಾಲೂಕಿನ ನೀಲಮ್ಮನ ಹಳ್ಳಿಯ ತಾಂಡಾದಲ್ಲಿ ಮಹಿಳೆ ಹಾಗು ಮಕ್ಕಳು ಸೇರಿ ಮೂವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮೀರಾಬಾಯಿ (25) ಹಾಗೂ ಮಕ್ಕಳಾದ ನಚ್ಚುಬಾಯಿ (3), ಗೋಲುಬಾಯಿ (2) ಮೃತ ದುರ್ದೈವಿಗಳು

Related Articles
Home add -Advt

ಪತಿ ಕಿರುಕುಳ, ಕೌಟುಂಬಿಕ ಕಲಹಕ್ಕೆ ನೊಂದು ಮಹಿಳೆ ತನ್ನ ಇಬ್ಬರು ಮಕ್ಕಳಿಗೆ ವಿಷವುಣಿಸಿ ತಾನೂ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಧನ್ನೂರು ಠಾಣೆ ಪೊಲೀಸರು ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿದ್ದಾರೆ.

*ಶೀತಗಾಳಿ ಜೊತೆಗೆ ಆಲಿಕಲ್ಲು ಮಳೆ ಎಚ್ಚರಿಕೆ*

https://pragati.taskdun.com/cold-waverain-alertimd/

Related Articles

Back to top button