Latest

*ಚಲಿಸುತ್ತಿದ ರೈಲು ಹತ್ತಲು ಹೋಗಿ ಕೆಳಗೆ ಬಿದ್ದ ಯುವತಿ: ಮುಂದೇನಾಯ್ತು?*

ಪ್ರಗತಿವಾಹಿನಿ ಸುದ್ದಿ: ಚಲಿಸುತ್ತಿದ್ದ ರೈಲು ಹತ್ತಲು ಹೋಗಿ ಯುವತಿ ಆಯತಪ್ಪಿ ಕೆಳಗೆ ಬಿದ್ದ ಘಟನೆ ಉತ್ತರ ಪ್ರದೇಶದ ಕಾನ್ಪುರ ರೈಲು ನಿಲ್ದಾಣದಲ್ಲಿ ನಡೆದಿದೆ.

Home add -Advt

ಕಾನ್ಪುರ ನಿಲ್ದಾಣದಲ್ಲಿ ನಿಂತಿದ್ದ ರೈಲಿಇನಿಂದ ಇಳಿದು ಯುವತಿ ಅಲ್ಲಿಯೇ ಇದ್ದ ಅಂಗಡಿಯಲ್ಲಿ ತಿಂಡಿ ತರಲೆಂದು ಹೋಗಿದ್ದಾಳೆ. ಆಕೆ ತಿಂಡಿ ಖರೀದಿಸುತ್ತಿದ್ದಂತೆ ರೈಲು ಚಲಿಸಲಾರಂಭಿಸಿದೆ. ರೈಲು ಹೊರಡುತ್ತಿದೆ ಎಂದು ಯುವತಿ ಖರೀದಿಸಿದ ತಿಂಡಿಯನ್ನೂ ಬಿಟ್ಟು ತಕ್ಷಣ ರೈಲು ಹತ್ತಲು ಯತ್ನಿಸಿದ್ದಾಳೆ. ಕಾಲು ಜಾರಿ ರೈಲ್ವೆ ಟ್ರ್ಯಾಕ್ ಹಾಗೂ ತಡೆಗೋಡೆ ಮಧ್ಯೆ ಬಿದ್ದಿದ್ದಾಳೆ.

ರೈಲ್ವೆ ರಕ್ಷಣಾ ತಂಡ ಹಾಗೂ ನಿಲ್ದಾಣದಲ್ಲಿದ್ದ ಇತರ ಪ್ರಯಾಣಿಕರು ಯುವತಿಯನ್ನು ಮೇಲಕೆತ್ತಿದ್ದಾರೆ. ಯುವತಿಗೆ ಗಾಯಗಳಾಗಿವೆ. ಅದೃಷ್ಟವಶಾತ್ ಯುವತಿ ಪ್ರಾಣಾಪಾಯದಿಂದ ಪಾರಾಗಿದ್ದಾಳೆ ಎಂದು ತಿಳಿದುಬಂದಿದೆ. ಈ ಭೀಕರ ದೃಶ್ಯ ರೈಲು ನಿಲ್ದಾಣದ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.

Related Articles

Back to top button