ಪ್ರಗತಿವಾಹಿನಿ ಸುದ್ದಿ, ಚಿಕ್ಕೋಡಿ – ಶ್ರಿವೀರಭದ್ರಶ್ವರ ದೇವಸ್ಥಾನ ಹಾಗೂ ಜೊಲ್ಲೆ ಚ್ಯಾರಿಟಿ ಫೌಂಡೇಶನ್ ಮೂಲಕ ಆರಂಭಿಸಲಾದ ಕೋವಿಡ್ ಕೇರ್ ಸೆಂಟರನಲ್ಲಿ 25 ಕೊರೋನಾ ರೋಗಿಗಳು ಗುಣಮುಖರಾಗಿ ಹೋಗಿರುವುದು ಖುಷಿ ತಂದಿದೆ. ನಾವು ಕೊಟ್ಟ ಕಲ್ಯಾಣ ಮಂಟಪವು ನಿಜಕ್ಕೂ ಕಲ್ಯಾಣವಾಗಿದೆ ಎಂದು ಶ್ರಿಶೈಲ ಜದ್ಗುರುಗಳು ಹಾಗೂ ಯಡುರಿನ ಶ್ರೀ ಶ್ರೀ ಶ್ರೀ 1008 ಜಗದ್ಗುರು ಡಾ. ಚನ್ನ ಸಿದ್ದರಾಮ್ ಪಂಡಿತಾರಾಧ್ಯ ಶಿವಾಚಾರ್ಯ ಮಹಾಸ್ವಾಮಿಗಳು ಹೇಳಿದರು.
ಚಿಕ್ಕೋಡಿ ತಾಲೂಕಿನ ಯಡೂರ ಗ್ರಾಮದ ಶ್ರಿವೀರಭದ್ರಶ್ವರ ದೇವಸ್ಥಾನದ ಆವರಣದ ಕಲ್ಯಾಣಮಂಟಪದಲ್ಲಿರುವ ಕೋವಿಡ್ ಕೇರ್ ಸೆಂಟರ್ ಗೆ ಶನಿವಾರ ಶ್ರಿಶೈಲ್ ಜದ್ಗುರುಗಳು ಹಾಗೂ ಸಂಸದ ಅಣ್ಣಾಸಾಹೇಬ ಜೊಲ್ಲೆ ಅವರು ಭೇಟಿ ನೀಡಿ ರೋಗಿಗಳ ಆರೋಗ್ಯ ವಿಚಾರಿಸಿದರು. ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಶ್ರಿಶೈಲ ಜದ್ಗುರುಗಳು, ಯಡೂರ ಗ್ರಾಮದ ಸುತ್ತಮುತ್ತಲಿನ ಗ್ರಾಮದಲ್ಲಿಯ ಕೊರೋನಾ ರೋಗಿಗಳ ಅನುಕೂಲಕ್ಕಾಗಿ ಸಂಸದ ಅಣ್ಣಾಸಾಹೇಬ ಜೋಲ್ಲೆಯವರು ಮುತುವರ್ಚಿಸಿ ಸ್ವಂತ ಖರ್ಚಿನಲ್ಲಿ ಕೋವಿಡ್ ಆಸ್ಪತ್ರೆಯನ್ನು ಪ್ರಾರಂಭಿಸಿದ್ದಾರೆ. ಕೋವಿಡ್ ರೋಗಿಗಳಿಗೆ ಅನುಕೂಲವನ್ನು ಮಾಡಿಕೊಟ್ಟಿದ್ದಾರೆ. ಈ ಕೋವಿಡ್ ಕೇರ್ ಸೆಂಟರ್ ನಲ್ಲಿ 25 ಕೊರೋನಾ ರೋಗಿಗಳು ಗುಣಮುಖರಾಗಿ ಹೋಗಿರುವುದರಿಂದ ನಾವು ಕೊಟ್ಟ ಕಲ್ಯಾಣ ಮಂಟಪವು ನಿಜಕ್ಕೂ ಕಲ್ಯಾಣವಾಗಿದೆ ಎಂದು ಶ್ರಿಶೈಲ ಜದ್ಗುರುಗಳು ಬಣ್ಣಿಸಿದರು.
ಸಂಸದ ಜೋಲ್ಲೆ ಸೇರಿ ಈ ಆಸ್ಪತ್ರೆಯಲ್ಲಿ ಕಾರ್ಯನಿರ್ವಹಿಸಿದ ವೈಧ್ಯಾಧಿಕಾರಿಗಳು, ಸಿಬ್ಬಂದಿ ಉತ್ತಮವಾದ ಆರೋಗ್ಯದ ಸೇವೆ ನೀಡಿದ್ದಾರೆ ಎಂದು ಶ್ರಿಶೈಲ ಜದ್ಗುರುಗಳು ತಿಳಿಸಿದರು.
ಸಂಸದ ಅಣ್ಣಾಸಾಹೇಬ ಜೊಲ್ಲೆ ಅವರು ಮಾತನಾಡಿ ಶ್ರಿಶೈಲ ಜದ್ಗುರುಗಳು ಯಡೂರ ಗ್ರಾಮದಲ್ಲಿ ನಮಗೆ ಕೋವಿಡ್ ಕೇರ್ ಸೆಂಟರವನ್ನು ಆರಂಭಿಸಲು ಕಲ್ಯಾಣ ಮಂಟಪದಲ್ಲಿ ಅವಕಾಶ ಮಾಡಿಕೊಟ್ಟು ಕೊರೋನಾ ರೋಗಿಗಳ ಸೇವೆಗೆ ಕೈಜೊಡಿಸಿದ್ದಾರೆ. ಈ ಕೋವಿಡ್ ಸೆಂಟರ್ ನಲ್ಲಿ 25 ಕ್ಕೂ ಹೆಚ್ಚು ರೋಗಿಗಳು ಗುಣಮುಖರಾಗಿ ಹೋಗಿರುವುದು ಸಂತಸ ತಂದಿದೆ ಎಂದು ಸಂಸದ ಅಣ್ಣಾಸಾಹೇಬ ಜೊಲ್ಲೆ ತಿಳಿಸಿದರು.
ಗ್ರಾ ಪಂ ಸದಸ್ಯ ಅಜಯ ಸೂರ್ಯವಂಶಿ ಪ್ರಾಸ್ತಾವಿಕ ಮಾತನಾಡಿದರು. ಈ ಕೋವಿಡ್ ಆಸ್ಪತ್ರೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ವೈಧ್ಯಾಧಿಕಾರಿಗಳನ್ನು. ಸಿಬ್ಬಂದಿ ವರ್ಗದವರನ್ನು ಹಾಗೂ ಬೀರೇಶ್ವರ ಬ್ಯಾಂಕಿನ ಸಿಬ್ಬಂದಿಗಳನ್ನು ಶ್ರಿಶೈಲ್ ಜದ್ಗುರುಗಳು ಸತ್ಕರಿಸಿದರು.
ಈ ಸಂದರ್ಭದಲ್ಲಿ ಗ್ರಾ ಪಂ ಉಪಾಧ್ಯಕ್ಷ ರಾಹುಲ ದೇಸಾಯಿ, ಸದಸ್ಯರಾದ ಅಮೀತ ಪಾಟೀಲ, ಮಂಜುನಾಥ ದೊಡ್ಡಮನಿ, ಪ್ರಕಾಶ ಕೋಕಣೆ, ಸಂತೋಷ ಶೇಗನೆ, ಅಮರ ಬೋರಗಾಂವೆ, ನವನಾಥ ಚವ್ಹಾನ, ವಿಕ್ರಾಂತ ದೇಸಾಯಿ, ವಿಕಾಸ ಪಾಟೀಲ, ಸತೀಶ ಪುಠಾಣಿ, ಡಾ. ಭೋಲೆ, ಡಾ. ಸಲಗರೆ ಮುಂತಾದವರು ಉಪಸ್ಥಿತರಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ