Kannada NewsLatestUncategorized

*ದೇಶ ಮತ್ತು  ಜನರ ಕಲ್ಯಾಣಕ್ಕಾಗಿ ಪ್ರಧಾನಿ ಮೋದಿಯವರ ಅಭಿವೃದ್ಧಿ ಕಾರ್ಯಗಳು ಪ್ರಶಂಸನೀಯ: ಸಂಸದ ಅಣ್ಣಾಸಾಹೇಬ‌ ಜೊಲ್ಲೆ*

ಪ್ರಗತಿವಾಹಿನಿ ಸುದ್ದಿ,ಚಿಕ್ಕೊಡಿ: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರವು  ಒಂಬತ್ತು ವರ್ಷಗಳನ್ನು ಪೂರೈಸಿದೆ
 ಈ ಅವಧಿಯಲ್ಲಿ ದೇಶ ಮತ್ತು  ಜನರ ಕಲ್ಯಾಣಕ್ಕಾಗಿ ಹಲವಾರು ಅಭಿವೃದ್ಧಿ ಕಾರ್ಯಗಳನ್ನು ಜಾರಿಗೆ ತಂದಿದ್ದಾರೆ.
ಇಂತಹ ಅಭಿವೃದ್ಧಿ ಕಾರ್ಯಗಳನ್ನು ಮನೆಮನೆಗೆ ತಲುಪಿಸಬೇಕು ಎಂದು ಸಂಸದ ಅಣ್ಣಾಸಾಹೇಬ‌ ಜೊಲ್ಲೆ ‌ಹೇಳಿದರು.
ಚಿಕೋಡಿ ಲೋಕಸಭಾ ‌ವ್ಯಾಪ್ತಿಯ ಯಡೂರ ಗ್ರಾಮ ಗಡಿಭವನದಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಕೇಂದ್ರ ಸರ್ಕಾರಕ್ಕೆ 9 ವರ್ಷ ಪೂರೈಸಿದ ಹಿನ್ನಲೆಯಲ್ಲಿ ಸರ್ಕಾರದ ಯೋಜನೆಗಳನ್ನು ಜನರಿಗೆ ತಲುಪಿಸುವ  ‌ಮಹಾ ಜನಸಂಪರ್ಕ ಅಭಿಯಾನ ಕಾರ್ಯಕ್ರಮಕ್ಕೆ ಚಾಲನೆಯನ್ನು ನೀಡಿ ಮಾತನಾಡಿದರು.
ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದ ಕೇಂದ್ರ ಸರ್ಕಾರ,  ಉಚಿತವಾಗಿ ಆಹಾರ ಧಾನ್ಯಗಳ ವಿತರಣೆ, ಕೊಟ್ಯಾಂತರ ಪ್ರಮಾಣದಲ್ಲಿ ಮನೆ, ಶೌಚಾಲಯಗಳ ನಿರ್ಮಾಣ,ಜಲಜೀವನ ಮಿಷನ್ ಮುಖಾಂತರ ಮನೆ ಮನೆಗೆ ಶುದ್ದಕುಡಿಯುವ ನೀರಿನ ಪೂರೈಕೆ, ಉಜ್ವಲ ಯೋಜನೆಯ‌ ಮುಖಾಂತ ಗ್ಯಾಸ್ ಸಿಲಿಂಡರ್ ಗಳ ವಿತರಣೆ, ಹೆಣ್ಣುಮಕ್ಕಳಿಗೆ ಸೈನ್ಯಕ್ಕೆ ಸೇರ್ಪಡೆಯಾಗುವ ಅವಕಾಶ, ಮುದ್ರಾ ಯೋಜನೆ,ಕಿಸಾನ ಸನ್ಮಾನ,ಮೇಡಿಕಲ್ ಕಾಲೇಜಗಳ ಸ್ಥಾಪನೆ ಸೇರಿದಂತೆ ಹತ್ತು ಹಲವಾರು ಅಭಿವೃಧಿ ಕಾಮಗಾರಿಗಳನ್ನು ಮಾಡಿದೆ. ಇಂತಹ ಅಭಿವೃದ್ಧಿ ಕಾಮಗಾರಿಗಳನ್ನು ಕಾರ್ಯಕರ್ತರು ಮನೆಮನೆಗೆ ತಲುಪಿಸುವಂತಹ  ಕೆಲಸ ಮಾಡಬೇಕು.
ಚಿಕ್ಕೋಡಿ ಜಿಲ್ಲಾ ಬಿಜೆಪಿ ಅಧ್ಯಕ್ಷ ಡಾ.ರಾಜೇಶ ನೆರ್ಲಿ ಮಾತನಾಡಿ ಪ್ರಧಾನಿ ನರೇಂದ್ರ ಮೋದಿಯವರು  ಭ್ರಷ್ಟಾಚಾರ ರಹಿತ ಒಳ್ಳೆಯ ಪ್ರಾಮಾಣಿಕ ಆಡಳಿತ ನಡೆಸಿದ್ದಾರೆ.ಕೇಂದ್ರ ಸರ್ಕಾರವು‌ ಜನಪರ ಯೋಜನೆಗಳನ್ನು ಪ್ರತಿ  ಮನೆಮನೆಗೆ ತಲುಪಿವೆ.ಕಾಂಗ್ರೆಸ್ ನ ಗ್ಯಾರಂಟಿಗಳಿಂದ ಆರ್ಥಿಕ ಪರಿಸ್ಥಿತಿ ಹದಗೆಡುತ್ತಿದೆ ಎಂದು ಕಾಂಗ್ರೆಸ್ ವಿರುದ್ಧ ಹರಿಹಾಯ್ದರು
ನಂತರ ಮಂಡಲದ ಅಧ್ಯಕ್ಷ ಸಂಜಯ ಪಾಟೀಲ, ಗ್ರಾ.ಪಂ ಸದಸ್ಯ ಅಜಯ ಸೂರ್ಯಶಿ,ಮಾಜಿ ಗ್ರಾ.ಪಂ ಅಧ್ಯಕ್ಷ ಅಮರ ಬೋರಗಾಂವೆ ಕಾರ್ಯಕ್ರಮ ಉದೇಶಿಸಿ ಮಾತನಾಡಿದರು.ಈ ಸಂಧರ್ಭದಲ್ಲಿ ರಾಜ್ಯ ಬಿಜೆಪಿ ರಾಜ್ಯ‌ ಉಪಾಧ್ಯಕ್ಷ ‌ದುಂಡಪ್ಪ ಬೆಂಡವಾಡೆ,ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸತೀಶ ಅಪ್ಪಾಜಿಗೋಳ,  ಗ್ರಾ.ಪಂ ಅಧ್ಯಕ್ಷ ಶ್ರೀದೇವಿ ವರಾಳೆ,ಉಪಾಧ್ಯಕ್ಷ ರಾಹುಲ ದೇಸಾಯಿ,ವಿಕ್ರಾಂತ ದೇಸಾಯಿ,ವಿನಾಯಕ ಚಿಕೋರ್ಡೆ,ಸತೀಶ ಪುಠಾಣಿ,ನವನಾಥ ಚವಾನ,ಸಂತೋಷ ಜೋಷಿ,ಮನೋಜ ಕಿಚಡೆ,ಮಹಾವೀರ ಮಂಗಸೂಳಿ,ಚಿದಾನಂದ ಕೋಳಿ,ಅಪ್ಪಾಸಾಹೇಬ ವನೇರೆ,ದೀಪಕ ಮಾನೆ,ಸನತಕುಮಾರ ಪಾಟೀಲ, ಶಂಕರ ಪವಾರ,ಅಜೀತ ಚಿಗರೆ,ದಿಲೀಪ ಪವಾರ,ಸಂಜು ನಾಂದ್ರೆ,ಜಯರಾಮ ಕಾನಡೆ ಸೇರಿದಂತೆ ಹೆಚ್ಚಿನ ಸಂಖ್ಯೆಯಲ್ಲಿ ಬಿಜೆಪಿ ಕಾರ್ಯಕರ್ತರು  ಉಪಸ್ಥಿತರಿದ್ದರು.

https://pragati.taskdun.com/mp-annasaheba-jollepressmeetchikkodi/

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button