Kannada NewsLatest

ಜಮೀರ್ ಅಹ್ಮದ್ ಆಲ್ ರೌಂಡರ್, ಸಿಕ್ಸರ್ ಹೊಡಿತಾರೆ; ಸತೀಶ್ ಜಾರಕಿಹೊಳಿ

ಪ್ರಗತಿವಾಹಿನಿ ಸುದ್ದಿ; ಬಾಗಲಕೋಟೆ: ಸಿದ್ದರಾಮಯ್ಯ ಮುಂದಿನ ಸಿಎಂ ಎಂಬ ಶಾಸಕ ಜಮೀರ್ ಅಹ್ಮದ್ ಹೇಳಿಕೆಗೆ ಪ್ರತಿಕ್ರಿಯಿಸಿರುವ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ, ಜಮೀರ್ ಅಹ್ಮದ್ ಆಲ್ ರೌಂಡರ್, ಸಿಕ್ಸರ್ ಹೊಡಿತಾರೆ ಎಂದು ಹೇಳಿದ್ದಾರೆ.

ಬಾಗಲಕೋಟೆಯಲ್ಲಿ ಮಾತನಾಡಿದ ಅವರು, ಮ್ಯಾಚ್ ಗೆಲ್ಲಬೇಕಾದಾಗ ಸಿಕ್ಸರ್ ಹೊಡೆಯುವವರನ್ನು ಕಳಿಸ್ತೇವೆ. ಜಮೀರ್ ಆಗಾಗ ಸಿಕ್ಸರ್ ಹೊಡೆಯುತ್ತಾರೆ ಇದು ಹೊಸದೇನಲ್ಲ. ನಾನೇ ಸಿಎಂ ಅಂತ ಹೇಳೆಂದು ಸಿದ್ದರಾಮಯ್ಯ ಸೂಚಿಸಿಲ್ಲ ಎಂದರು.

ಕ್ರಿಕೆಟ್ ಆಡುವಾಗ ಸಿಕ್ಸರ್ ಹೊಡೆಯುವುದನ್ನು ಕೇಳಿದ್ದೇವೆ. ಹಾಗೇ ಜಮೀರ್ ಅಹ್ಮದ್ ಆಲ್ ರೌಂಡರ್, ಆಗಾಗ ಸಿಕ್ಸರ್ ಹೊಡಿತಾರೆ. ಅವರು ಅಭಿಮಾನದಿಂದ ಸಿದ್ದರಾಮಯ್ಯ ಭಾವಿ ಸಿಎಂ ಎಂದು ಹೇಳಿದ್ದಾರೆ ಹೊರತು ಜಮೀರ್ ಹೇಳಿಕೆ ಬಗ್ಗೆ ತಪ್ಪು ಗ್ರಹಿಕೆ ಬೇಡ. ಕಾಂಗ್ರೆಸ್ ನಲ್ಲಿ ಯಾವುದೇ ಗುಂಪುಗಾರಿಕೆಯೂ ಇಲ್ಲ ಎಂದು ಹೇಳಿದರು.
ವಿದ್ಯಾರ್ಥಿಗಳಿಗೆ ಉಚಿತ ಟ್ಯಾಬ್ ವಿತರಣೆ

Related Articles

Back to top button