
ಪ್ರಗತಿವಾಹಿನಿ ಸುದ್ದಿ: ಬೆಳಗಾವಿ ಗ್ರಾಮೀಣ ಕ್ಷೇತ್ರದ ಕೊಂಡಸಕೊಪ್ಪ ಗ್ರಾಮದಲ್ಲಿ ನಿರ್ಮಾಣ ಹಂತದಲ್ಲಿರುವ ಶ್ರೀ ವಿಠ್ಠಲ ಬೀರದೇವರ ದೇವಸ್ಥಾನ ಕಟ್ಟಡದ ಮೇಲ್ಚಾವಣಿಗೆ ಕಾಂಕ್ರೀಟ್ (ಸ್ಲ್ಯಾಬ್) ಹಾಕುವ ಕಾಮಗಾರಿಗೆ ಸ್ಥಳೀಯ ಜನ ಪ್ರತಿನಿಧಿಗಳು, ಗ್ರಾಮದ ಮುಖಂಡರು ಹಾಗೂ ಯುವ ಕಾಂಗ್ರೆಸ್ ಮುಖಂಡ ಮೃಣಾಲ್ ಹೆಬ್ಬಾಳಕರ್ ಸೇರಿ ಪೂಜೆ ನೆರವೇರಿಸಿ, ಚಾಲನೆ ನೀಡಿದರು.
1.50 ಕೋಟಿ ರೂ, ವೆಚ್ಚದಲ್ಲಿ ದೇವಸ್ಥಾನ ನಿರ್ಮಾಣ ಮಾಡಲಾಗುತ್ತಿದೆ. ದೇವಸ್ಥಾನದ ನಿರ್ಮಾಣಕ್ಕಾಗಿ ಬಾಗಲಕೋಟೆಯ ಶೆಲ್ಲಿಕೇರಿಯಿಂದ ವಿಶೇಷ ಕಲ್ಲುಗಳನ್ನು ತರಿಸಿ, ಒಡಿಶಾ ರಾಜ್ಯದ ಶಿಲ್ಪಕಾರರಿಂದ ಕಲ್ಲುಗಳನ್ನು ಕೆತ್ತನೆ ಮಾಡಿಸಲಾಗಿದ್ದು, ಆದಷ್ಟು ಬೇಗ ಸುಂದರ ದೇವಸ್ಥಾನ ನಿರ್ಮಾಣ ಮಾಡುವಂತೆ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಅವರು ಗುತ್ತಿಗೆದಾರರಿಗೆ ಸೂಚನೆ ನೀಡಿದ್ದಾರೆ.

ಈ ಸಂದರ್ಭದಲ್ಲಿ ವಿಠ್ಠಲ ಸಾಂಬ್ರೇಕರ್, ಮಹಾಲಿಂಗ ಸಾಂಬ್ರೇಕರ್, ಮಲ್ಲಪ್ಪ ಸಾಂಬ್ರೇಕರ್, ಸುರೇಶ ಕರಗುಪ್ಪಿಕರ್, ಬಾಗಣ್ಣ ಸಾಂಬ್ರೇಕರ್, ವಿಠ್ಠಲ ರಾಮಾ ಸಾಂಬ್ರೇಕರ್, ಪಿರಾಜಿ ಸಾಂಬ್ರೇಕರ್, ಪಕೀರ್ ಸಾಂಬ್ರೇಕರ್, ಗಂಗಪ್ಪ ಸಾಂಬ್ರೇಕರ್, ಗಂಗಾರಾಮ ಅಷ್ಠೆಕರ್, ದೇವಸ್ಥಾನ ಕಮಿಟಿಯ ಸದಸ್ಯರು, ಗ್ರಾಮ ಪಂಚಾಯತಿಯ ಸದಸ್ಯರು ಸೇರಿದಂತೆ ಗ್ರಾಮದ ನಾಗರಿಕರು ಉಪಸ್ಥಿತರಿದ್ದರು.