Belagavi NewsBelgaum NewsEducationLatest

*ಗ್ರಾಮೀಣ ಶಾಲೆಗಳ ಸ್ಥಿತಿ ಗತಿ ಪರಿಶೀಲಿಸಿದ ಮೃಣಾಲ ಹೆಬ್ಬಾಳಕರ್*

 

ಪ್ರಗತಿವಾಹಿನಿ ಸುದ್ದಿ: ಯುವ ಕಾಂಗ್ರೆಸ್ ಮುಖಂಡ ಮೃಣಾಲ ಹೆಬ್ಬಾಳಕರ್ ಅವರು ಸೋಮವಾರ ಬೆಳಗಾವಿ ಗ್ರಾಮೀಣ ಕ್ಷೇತ್ರದ ವಿವಿಧೆಡೆ ತೆರಳಿ ಸರಕಾರಿ ಶಾಲೆಗಳ ಸ್ಥಿತಿಗತಿ ಪರಿಶೀಲಿಸಿದರು.

ಗ್ರಾಮಸ್ಥರು, ಶಿಕ್ಷಕರು ಹಾಗೂ ಮಕ್ಕಳೊಂದಿಗೆ ಮಾತನಾಡಿ, ಸಮಸ್ಯೆಗಳನ್ನು ಆಲಿಸಿದ ಅವರು, ಶೀಘ್ರ ಸ್ಪಂದಿಸುವ ಭರವಸೆ ನೀಡಿದರು.

ಬಾಕನೂರ್ ಗ್ರಾಮದ ಹಿರಿಯ ಮರಾಠಿ ಪ್ರಾಥಮಿಕ ಶಾಲೆಗೆ ಭೇಟಿ ನೀಡಿ, ಶಾಲೆಯ ಕುಂದುಕೊರತೆಗಳನ್ನು ಆಲಿಸಿ, ಮೂಲ ಸೌಕರ್ಯಗಳನ್ನು ಒದಗಿಸುವ ಭರವಸೆ ನೀಡಿದರು. ಗ್ರಾಮದ ಅಂಗನವಾಡಿ ಕೇಂದ್ರಕ್ಕೂ ಭೇಟಿ ನೀಡಿ, ಮಕ್ಕಳ ಆರೋಗ್ಯ ಹಾಗೂ ಮಕ್ಕಳಿಗೆ ಪೂರೈಸುವ ಆಹಾರದ ಬಗ್ಗೆ ಮಾಹಿತಿ ಪಡೆದರು. 

ಈ ಸಂದರ್ಭದಲ್ಲಿ ಮನೋಹರ ಬೆಳಗಾಂವ್ಕರ್, ಪಾಂಡು ನಾಯಿಕ ನಿಂಗು ಕುಲಮ್, ಅಮೂಲ ಮೆನಸೆ, ಸುರೇಶ ನಾಯಿಕ, ರಾಮಲಿಂಗ ಸಾವಂತ, ಪರಶುರಾಮ ಮಜುಕರ, ಶಾಂತಾರಾಮ ಮಜುಕರ, ದಶರಥ ನಾಯಿಕ, ಧರೆಪ್ಪ ನಾಯಿಕ ಹಾಗೂ ಶಾಲಾ ಸಿಬ್ಬಂದಿ ಉಪಸ್ಥಿತರಿದ್ದರು.

​ ನಂತರ ಬೆಳಗಾವಿ ಗ್ರಾಮೀಣ ಕ್ಷೇತ್ರದ ಇನಾಮ್ ಬಡಸ್ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಮರಾಠಿ ಶಾಲೆಗೆ ಭೇಟಿ ನೀಡಿ, ಶಿಥಿಲಾವಸ್ಥೆಯಲ್ಲಿರುವ ಶಾಲಾ ಕಟ್ಟಡದ ಪರಿಶೀಲನೆ ನಡೆಸಿ, ನೂತನ ಕಟ್ಟಡ ನಿರ್ಮಾಣದ ಭರವಸೆ ನೀಡಿದರು.

ಮಳೆಯಿಂದ ಹಾನಿಗೊಳಗಾಗಿರುವ ಗ್ರಾಮದೊಳಗಿನ ರಸ್ತೆಯ ಅಭಿವೃದ್ಧಿ ಕುರಿತು ಗ್ರಾಮಸ್ಥರೊಂದಿಗೆ ಚ​ರ್ಚಿಸಿದರು. 

ಈ ವೇಳೆ ಮನೋಹರ ಬೆಳಗಾಂವ್ಕರ್, ದುರಗಪ್ಟ ಪಾಟೀಲ, ವಿಠ್ಠಲ ಪಾಟೀಲ, ಲಕ್ಷ್ಮಣ ಪಾಟೀಲ, ನಾರಾಯಣ ಠಾನಬ್, ಸಾಗರ ತೊರವಾಳಕರ್, ಗಿತೇಶ್ ಠಾನಬ್, ಕೃಷ್ಣ ಕಾಂಬಳೆ ಹಾಗೂ ಶಾಲಾ ಸಿಬ್ಬಂದಿ ಉಪಸ್ಥಿತರಿದ್ದರು.

​ 

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button