Kannada NewsNational

*ಮುಂಬೈ ದಾಳಿ ಮಾಸ್ಟರ್ ಮೈಂಡ್ ತಹವೂರ್ ರಾಣಾ ಭಾರತಕ್ಕೆ*

ಪ್ರಗತಿವಾಹಿನಿ ಸುದ್ದಿ: 26/11ರ ಮುಂಬೈ ದಾಳಿ ಮಾಸ್ಟರ್ ಮೈಂಡ್, ಉಗ್ರ ತಹವೂರ್ ರಾಣಾನನ್ನು ಭಾರತಕ್ಕೆ ಕರೆತರಲಾಗಿದೆ.

Home add -Advt

ಎನ್ಐಎ ಅಧಿಕಾರಿಗಳ ತಂಡ ಉಗ್ರ ತಹವೂರ್ ರಾಣಾನನ್ನು ವಿಶೇಷ ವಿಮಾನದಲ್ಲಿ ಅಮೆರಿಕಾದಿಂದ ಭಾರತಕ್ಕೆ ಕರೆತಂದಿದ್ದು, ತಹವೂರ್ ರಾಣಾ ಇರುವ ವಿಮಾನ ದೆಹಲಿಗೆ ಆಗಮಿಸಿದೆ.

ದೆಹಲಿಲ ಪಾಲಂ ಏರ್ ಬೇಸ್ ಗೆ ವಿಶೇಷ ವಿಮಾನ ಬಂದಿಳಿದಿದ್ದು, ಅಲ್ಲಿಂದ ಬುಲೇಟ್ ಪ್ರೂಫ್ ವಾಹನದಲ್ಲಿ ರಾಣಾನನ್ನು ತಿಹಾರ್ ಜೈಲಿಗೆ ಕರೆದೊಯ್ಯಲಾಗುತ್ತಿದೆ.

26/11ರ ಮುಂಬೈನಲ್ಲಿ ನಡೆದ ಭಯೋತ್ಪಾದಕ ದಾಳಿಯಲ್ಲಿ 166 ಜನರು ಸಾವನ್ನಪ್ಪಿದ್ದರು. ಹಲವರು ಗಾಯಗೊಂಡಿದ್ದರು. ಈ ದಾಳಿಯ ಮಾಸ್ಟರ್ ಮೈಂಡ್ ಉಗ್ರ ತಹವೂರ್ ರಾಣಾ ಆಗಿದ್ದು, ಅಮೆರಿಕಾದಿಂದ ಗಡಿಪಾರಾರು ಆದೇಶ ಹೊರಡಿಸಲಾಗಿತ್ತು. ಇದರ ಬೆನ್ನಲ್ಲೇ ಎನ್ ಐಎ ಅಧಿಕಾರಿಗಳು ಉಗ್ರನನ್ನು ವಶಕ್ಕೆ ಪಡೆದು ಭಾರತಕ್ಕೆ ಕರೆತಂದಿದ್ದಾರೆ.


Related Articles

Back to top button