Latest

ಮಹಾಮಳೆಗೆ ತತ್ತರಿಸಿದ ಮುಂಬೈ ಮಹಾನಗರಿ; ಜನಜೀವನ ಅಸ್ತವ್ಯಸ್ತ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ನಿರಂತರ ಸುರಿದ ಭಾರೀ ಮಳೆಗೆ ಮುಂಬೈ ಮಹಾನಗರಿ ತತ್ತರಿಸಿದೆ. ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದ್ದು ಮುಂಬೈ ಹಾಗೂ ಸುತ್ತಮುತ್ತಲಿನ ಜಿಲ್ಲೆಗಳಲ್ಲಿ  ಹವಾಮಾನ ಇಲಾಖೆ ಶುಕ್ರವಾರದವರೆಗೂ ಯೆಲ್ಲೋ ಅಲರ್ಟ್  ಘೋಷಿಸಿದೆ.

ಮಹಾನಗರದ ಹಲವು ಪ್ರದೇಶಗಳು ಜಲಾವೃತಗೊಂಡಿದ್ದು ರಸ್ತೆಗಳೆ ಮುಳುಗಡೆಯಾಗಿವೆ.  ಅನೇಕ ಕಡೆ  ಸಂಚಾರವೇ ಸ್ಥಗಿತಗೊಂಡಿದ್ದು ಮನೆಗಳಲ್ಲಿ ನೀರು ನುಗ್ಗಿದೆ. ಬೀದಿಗಳಲ್ಲಿ ನಿಲ್ಲಿಸಿಟ್ಟಿದ್ದ ಅನೇಕ ವಾಹನಗಳು ನೀರಿನಲ್ಲಿ ಸಿಕ್ಕಿಹಾಕಿಕೊಂಡಿವೆ. ಹೀಗಾಗಿ ಅನೇಕ ಮಾರ್ಗಗಳ ಸಂಚಾರವನ್ನು ಬದಲಾಯಿಸಲಾಗಿದೆ. ಹಲವು ರೈಲು ಸಂಚಾರಗಳು 10-15 ನಿಮಿಷ ತಡವಾಗಿವೆ.

ನಗರದ ಹೃದಯ ಭಾಗದಲ್ಲಿ 24 ತಾಸುಗಳಲ್ಲಿ 95.81 ಮಿ.ಮೀ. ಮಳೆಯಾಗಿದ್ದು ಹೊರವಲಯದಲ್ಲಿ 115.9ರಿಂದ 116.79 ಮಿ.ಮೀ. ಮಳೆ ದಾಖಲಾಗಿದೆ. ಮಳೆಯ ಆರ್ಭಟ ಮಂಗಳವಾರವೂ ಮುಂದುವರಿದಿದ್ದು ಮಬ್ಬು ಮುಸುಕಿದಂಥ ವಾತಾವರಣ ಆವರಿಸಿಕೊಂಡಿದೆ.

ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ ಶಿಂದೆ ಅವರು ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿ ಎಲ್ಲೆಡೆ ಕಟ್ಟೆಚ್ಚರ ವಹಿಸುವಂತೆ ಸೂಚನೆ ನೀಡಿದ್ದಾರೆ. ಇದೇ ವೇಳೆ ರಾಯಗಡ, ರತ್ನಾಗಿರಿ, ಸಿಂಧುದುರ್ಗ ಭಾಗಗಳಲ್ಲಿ ಭಾರೀ ಮಳೆ ಸುರಿಯುವ ಸಾಧ್ಯತೆಗಳಿರುವ ಕಾರಣ ಜು.8ರವರೆಗೆ  ಆರೆಂಜ್ ಅಲರ್ಟ್ ಘೋಷಿಸಲಾಗಿದೆ.

ಮನೆಗೆ ನುಗ್ಗಿದ ಟ್ರಕ್; ಮೂವರ ದುರ್ಮರಣ

 

 

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button