LatestNationalPolitics

*ಮುಂಬೈ ಮಹಾನಗರ ಪಾಲಿಕೆ ಚುನಾವಣೆ: ಬಿಜೆಪಿಗೆ ಭರ್ಜರಿ ಗೆಲುವು: ಠಾಕ್ರೆ ಸಹೋದರರಿಗೆ ತೀವ್ರ ಹಿನ್ನಡೆ*

ಪ್ರಗತಿವಾಹಿನಿ ಸುದ್ದಿ: ದೇಶದ ಅತ್ಯಂತ ಶ್ರೀಮಂತ ಮಹಾನಗರ ಪಾಲಿಕೆ ಎಂಬ ಹೆಗ್ಗಳಿಕೆ ಪಡೆದಿರುವ ಬೃಹನ್ ಮುಂಬೈ ಮಹಾನಗರಪಾಲಿಕೆ ಚುನಾವಣಾ ಫಲಿತಾಂಶ ಹೊರಬಿದ್ದಿದೆ. ಅಧಿಕೃತ ಘೋಷಣೆ ಮಾತ್ರ ಬಾಕಿ ಇದೆ.

ಮುಂಬೈ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ಮಹಾಯತಿ ಭರ್ಜರಿ ಗೆಲುವು ಸಾಧಿಸಿದೆ. ಠಾಕ್ರೆ ಸಹೋದರರಿಗೆ ತೀವ್ರ ಹಿನ್ನಡೆಯಾಗಿದೆ. ಉದ್ಧವ್ ಠಾಕ್ರೆ ನೇತೃತ್ವದ ಯುಬಿಟಿ ಹಿನ್ನಡೆಯಲ್ಲಿದೆ. ಮತ ಎಣಿಕೆ ಕಾರ್ಯ ಸಂಪೂರ್ಭವಾಗಿ ಮುಕ್ತಾಯವಾಗಿಲ್ಲವಾದರೂ ಬಿಜೆಪಿ ಗೆಲುವು ನಿಶ್ಚಿತವಾಗಿದೆ. ಮ್ಯಾಜಿಕ್ ಸಂಖ್ಯೆಯನ್ನೂ ದಾಟಿ ಜಯಭೇರಿಯತ್ತ ಮುನ್ನುಗ್ಗಿದೆ.

ಸದ್ಯದ ಮಾಹಿತಿ ಪ್ರಕಾರ 227 ವಾರ್ಡ್ ಗಳ ಪೈಕಿ ಬಿಜೆಪಿ 129 ಸ್ಥಾನಗಳಲ್ಲಿ ಗೆಲುವು ಸಾಧಿಸಿದೆ. ಶಿವಸೇನಾ ಉದ್ಧವ್ ಠಾಕ್ರೆ ಬಣ 72, ಕಾಂಗ್ರೆಸ್ 15, ಎನ್ ಸಿಪಿ 2, ಹಾಗೂ ಇತರರು 9 ಸ್ಥಾನಗಳಲ್ಲಿ ಗೆಲುವು ಸಾಧಿಸಿದ್ದಾರೆ.

ಬೃಹನ್ ಮುಂಬೈ ಮಹಾನಗರ ಪಾಲಿಕೆ ಚುನಾವಣೆಯನ್ನು ಗೆಲ್ಲಲೇಬೇಕು ಎಂಬ ಕಾರಣಕ್ಕೆ ಹಲವು ವರ್ಷಗಳ ಬಳಿಕ ಠಾಕ್ರೆ ಸಹೋದರರು ಒಂದಾಗಿ ಚುನಾವಣೆ ಎದುರಿಸಿದ್ದರು. ಆದರೆ ಠಾಕ್ರೆ ಸಹೋದರರಿಗೆ ಹಿನ್ನಡೆಯಾಗಿದ್ದು, ಬಿಜೆಪಿಯ ಮಹಾಯತಿ ಜಯಭೇರಿ ಭಾರಿಸಿದೆ.

Home add -Advt

ಬೃಹನ್ ಮುಂಬೈ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ಮಹಾಯತಿ ಮಿತ್ರಕೂಟ ಶಿವಸೇನೆಯ ಕೋಟೆಯನ್ನು ಛಿದ್ರಗೊಳಿಸಿದೆ. ಈ ಮೂಲಕ ಶಿವಸೇನೆಯ 30 ವರ್ಷಗಳ ಆಡಳಿತ ಕೊನೆಯಾಗಿದ್ದು, ಮೊದ ಬಾರಿಗೆ ಬಿಜೆಪಿಗೆ ಮುಂಬೈ ಮೇಯರ್ ಪಟ್ಟ ಖಚಿತವಾಗಿದೆ.

Related Articles

Back to top button