
ಪ್ರಗತಿವಾಹಿನಿ ಸುದ್ದಿ; ಮುಂಬೈ: ಕಾಮ ಪಿಪಾಸುಗಳು ಮೂಕ ಪ್ರಾಣಿಗಳನ್ನೂ ಬಿಡುತ್ತಿಲ್ಲ. ಇತ್ತೀಚೆಗಷ್ಟೇ ಗೋವಿನ ಮೇಲೆ, ಶ್ವಾನದ ಮೇಲಿನ ಅತ್ಯಾಚಾರ ಪ್ರಕರಣ ಬೆಳಕಿಗೆ ಬಂದಿತ್ತು. ಇದರ ಬೆನ್ನಲ್ಲೇ ಮತ್ತೊಂದು ಹೆಣ್ಣು ಶ್ವಾನದ ಮೇಲೆ ಕಾಮುಕನೊಬ್ಬ ಅಟ್ಟಹಾಸ ಮೆರೆದಿರುವ ಘಟನೆ ಬೆಳಕಿಗೆ ಬಂದಿದೆ.
ಮುಂಬೈನಲ್ಲಿ ಈ ಘೋರ ಘಟನೆ ನಡೆದಿದ್ದು, 30 ವರ್ಷದ ಕಾರ್ಮಿಕನೊಬ್ಬ ಹೆಣ್ಣು ಶ್ವಾನದ ಬಾಯಿಗೆ ಹಗ್ಗ ಕಟ್ಟಿ ಕಾರ್ ಪಾರ್ಕಿಂಗ್ ಬಳಿ ಎಳೆದು ತಂದು ಅದರ ಮೇಲೆ ಅತ್ಯಾಚಾರವೆಸಗಿದ್ದಾನೆ. ಆರೋಪಿಯನ್ನು ಶೋಬ್ನಾಥ್ ಸರೋಜ್ ಎಂದು ಗುರುತಿಸಲಾಗಿದೆ.
ನಾಯಿಯ ನರಳಾಟ ಕೇಳಿ ಸ್ಥಳಕ್ಕೆ ಬಂದ ಸಾರ್ವಜನಿಕರು ದಂಗಾಗಿದ್ದಾರೆ. ಸಧ್ಯ ಆರೋಪಿಯನ್ನು ಬಂಧಿಸಲಾಗಿದ್ದು, ಐಪಿಸಿ ಸೆಕ್ಷನ್ 377 ಅಡಿಯಲ್ಲಿ ಪ್ರಾಣಿಗಳ ಮೇಲೆ ಕ್ರೌರ್ಯ ಕೇಸ್ ದಾಖಲಿಸಲಾಗಿದೆ.