Latest

ಕೈಬಾಂಬ್ ಸ್ಫೋಟ: ಛಿದ್ರ ಛಿದ್ರಗೊಂಡ ಆಕಳಿನ ಬಾಯಿ

ಪ್ರಗತಿವಾಹಿನಿ ಸುದ್ದಿ; ಮುಂಡಗೋಡ: ಕಾಡುಪ್ರಾಣಿಗಳ ಬೇಟೆಗಾಗಿ ಇಟ್ಟಿದ್ದ ಕೈಬಾಂಬ್ ಸ್ಫೋಟಗೊಂಡು ಆಕಳಿನ ಬಾಯಿ ಛಿದ್ರಗೊಂಡಿರುವ ಹೃದಯವಿದ್ರಾವಕ ಘಟನೆ ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡದಲ್ಲಿ ನಡೆದಿದೆ.

ಇಲ್ಲಿನ ಸನಹಳ್ಳಿ ಜಲಾಶಯದ ಬಳಿ ಈ ದುರ್ಘಟನೆ ಸಂಭವಿಸಿದೆ. ಮೇವು ಅರಸಿ ಜಲಾಶಯದ ಬಳಿ ಬಂದ ಆಕಳೊಂದು ಕಾಡುಪ್ರಾಣಿಗಳ ಬೇಟೆಗಾಗಿ ಇಟ್ಟಿದ್ದ ಕೈಬಾಂಬ್ ತಿನ್ನಲು ಯತ್ನಿಸಿದೆ. ಸ್ಫೋಟಗೊಂಡ ಪರಿಣಾಮ ಆಕಳಿನ ಬಾಯಿ ಛಿದ್ರಗೊಂಡಿದೆ.

ಅಪ್ಪು ನಾರಾಯಣಸ್ವಾಮಿ ನಾಯರ್ ಎಂಬುವವರಿಗೆ ಸೇರಿದ ಆಕಳು ಇದಾಗಿದ್ದು, ಗಂಭೀರವಾಗಿ ಗಾಯಗೊಂಡಿರುವ ಆಕಳಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಸ್ಥಳಕ್ಕೆ ಅರಣ್ಯದಹಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಸ್ಥಳದಲ್ಲಿ ಮತ್ತೊಂದು ಜೀವಂತ ಕೈಬಾಂಬ್ ಪತ್ತೆಯಾಗಿದೆ.

ಮುಂಡಗೋಡ ಪೊಲೀಸ್ ಠಾನೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

Home add -Advt

ಅತ್ಯಾಚಾರ ಆರೋಪಿಗೆ ಕೊರೊನಾ ರಕ್ಷಣಾತ್ಮಕ ಅಸ್ತ್ರ

Related Articles

Back to top button