Latest

ಪರವಾನಗಿ ಪಾವತಿಗೆ ತಂತ್ರಾಂಶ ರೂಪಿಸಿದ ಮಹಾನಗರ ಪಾಲಿಕೆ; ಆನ್‌ಲೈನ್‌ನಲ್ಲಿ ಪಡೆದುಕೊಳ್ಳಲು ಅವಕಾಶ

ಪ್ರಗತಿವಾಹಿನಿ ಸುದ್ದಿ, ಮೈಸೂರು: ಉದ್ದಿಮೆ ಪರವಾನಗಿ ಪಾವತಿಗೆ ತಂತ್ರಾಂಶ ರೂಪಿಸಿರುವ ಇಲ್ಲಿನ ಮಹಾನಗರಪಾಲಿಕೆ, ಆನ್‌ಲೈನ್‌ನಲ್ಲಿ ಪಡೆದುಕೊಳ್ಳಲು ಅವಕಾಶ ಕಲ್ಪಿಸಿದೆ.

ಈ ನೂತನ ಮತ್ತು ಸರಳೀಕೃತ ವ್ಯವಸ್ಥೆಗೆ ಮೇಯರ್‌ ಶಿವಕುಮಾರ್ ಪಾಲಿಕೆಯಲ್ಲಿ ಚಾಲನೆ ನೀಡಿದರು.https://mysurucitycorporation.co.in/WebSiteMysuru/Home.aspx ಜಾಲತಾಣದಲ್ಲಿ ಆನ್‌ಲೈನ್‌ ಮೂಲಕ ಉದ್ದಿಮೆ ರಹದಾರಿ ನವೀಕರಣ ಶುಲ್ಕ ಪಾವತಿಸಿದ ತಕ್ಷಣವೇ ರಹದಾರಿಯನ್ನು ನವೀಕರಬಹುದಾಗಿದೆ. ಈ ವಿಧಾನವು ಬಹು ಆಯಾಮಗಳಲ್ಲಿ ಬಹುಪಯೋಗಿಯಾಗಿದೆ. ಉದ್ದಿಮೆದಾರರು ತಾವಿದ್ದಲ್ಲಿಯೇ ಶುಲ್ಕವನ್ನು ಪಾವತಿಸಿ ರಹದಾರಿ ಪಡೆದುಕೊಳ್ಳಬಹುದು. ಮಧ್ಯವರ್ತಿಗಳ ಸಹಾಯವಿಲ್ಲದೆ ಸರಳ ವಿಧಾನ ಅನುಸರಿಸಬಹುದಾಗಿದೆ. ಇದೊಂದು ಕಾಗದರಹಿತ ಮತ್ತು ಪರಿಸರ ಸ್ನೇಹಿ ವಿಧಾನವಾಗಿದೆ’ ಎಂದು ತಿಳಿಸಿದರು.

“ಪ್ರಮಾಣಪತ್ರವನ್ನು ನೇರವಾಗಿ ಡೌನ್‌ಲೋಡ್ ಮಾಡಿಕೊಳ್ಳಬಹುದಾಗಿದೆ. ಕಚೇರಿಗಳಿಗೆ ಅಲೆಯಬೇಕಾದ ಸ್ಥಿತಿ ‌ಇರುವುದಿಲ್ಲ. ಮೂರು ವರ್ಷದ್ದನ್ನು ಒಂದೇ ಬಾರಿಗೆ ಕಟ್ಟಿ ಪ್ರಮಾಣಪತ್ರ ಪಡೆದುಕೊಳ್ಳಬಹುದು” ಎಂದು ತಿಳಿಸಿದರು.

ಉಪ ಮೇಯರ್‌ ಡಾ. ಜಿ.ರೂಪಾ ಯೋಗೇಶ್, ಪಾಲಿಕೆಯ ಕಾಂಗ್ರೆಸ್ ನಾಯಕ ಅಯೂಬ್ ಖಾನ್, ಜೆಡಿಎಸ್ ನಾಯಕಿ ಅಶ್ವಿನಿ ಅನಂತು ಇದ್ದರು.

ಶಾಸಕ ಹರೀಶ್ ಪೂಂಜಾಗೆ ಬೆದರಿಕೆ ಕೇಸ್; CID ತನಿಖೆಗೆ ಆದೇಶ

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button