Kannada NewsKarnataka NewsLatest

ಮುತ್ಯಾನಟ್ಟಿ ಮರ್ಡರ್ : ಇಬ್ಬರು ಆರೋಪಿಗಳು ಅಂದರ್

 

ಪ್ರಗತಿವಾಹಿನಿ ಸುದ್ದಿ, ಅಗಸಗಿ:

ಬೆಳಗಾವಿ ತಾಲೂಕಿನ ಮುತ್ಯಾನಟ್ಟಿ ಗ್ರಾಮದಲ್ಲಿ ಜಮೀನು ವಿವಾದ ಮತ್ತು ಹಳೆ ವೈಷಮ್ಯಕ್ಕೆ ಸಂಬಂಧಿಸಿದಂತೆ ಜೂನ್ 27 ರಂದು ರಾತ್ರಿ   ಸಿದ್ರಾಯಿ ಕಣ್ಣಪ್ಪಾ ನಾಯಿಕ ಮಾರಕಾಸ್ರ್ತಗಳಿಂದ ಹಲ್ಲೆ ನಡೆಸಿ ಕೂಲೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಇಬ್ಬರು ಆರೋಪಿಗಳನ್ನು ಬಂಧಿಸುವಲ್ಲಿ ಕಾಕತಿ ಪೋಲಿಸರು ಯಶಸ್ವಿಯಾಗಿದ್ದಾರೆ.
4 ಜನ ಕೊಲೆ ಆರೋಪಿಗಳಲ್ಲಿ ಸಹೋದರರಾದ ಕಣ್ಣಪ್ಪಾ ಯಲ್ಲಪ್ಪಾ ನಾಯಿಕ (28) ಮತ್ತು ಯಲ್ಲಪ್ಪಾ ಯಲ್ಲಪ್ಪಾ ನಾಯಿಕ (25) ಬಂಧಿತರು.

ಈ ಕೊಲೆಗೆ ಸಂಬಂಧಿಸಿದಂತೆ ಕಾಕತಿ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ತದನಂತರ ಬೆಳಗಾವಿ ಪೋಲಿಸ್ ಆಯುಕ್ತರ ಮಾರ್ಗದರ್ಶನದಲ್ಲಿ ಎಸಿಪಿ ಬಾಲಚಂದ್ರ ಶಿಂಗ್ಯಾಗೋಳ ನೇತೃತ್ವದ ಸಿಪಿಐ ಶ್ರೀಶೈಲ ಕೌಜಲಗಿ, ಎಎಸ್ಐ ಪರಸನ್ನವರ ಮತ್ತು ಪಟವರ್ಧನ್ ಹಾವಾಲ್ದಾರಗಳಾದ ಅಡಿವೆಪ್ಪಾ ಕುಂಡೆದ , ಬಿ ಎಸ್ ನಾಗನ್ನವರ, ಎಮ್ ವಿ ತಳವಾರ, ಕೊಟಬಾಗಿ ಮತ್ತು ಲಮಾಣಿ  ಒಳಗೊಂಡ ತಂಡ ಕಳೆದ ನಾಲ್ಕು ದಿನಗಳಿಂದ ಆರೋಪಿಗಳ ಸೆರೆಗಾಗಿ ಹುಡುಕಾಟ ನಡೆಸಿತ್ತು. ಖಚಿತ ಮಾಹಿತಿ ಪತ್ತೆ ಹಚ್ಚಿದ ತಂಡ ಅವಿತುಕೊಂಡ್ಡಿದ್ದ ಇಬ್ಬರು ಆರೋಪಿಗಳನ್ನು ಸುತಗಟ್ಟಿ ದಾಭಾ ಹತ್ತಿರ ಬಂಧಿಸಿದ್ದಾರೆ.
ಇನ್ನುಳಿದ ಆರೋಪಿಗಳಾದ ತಾಯಿ ಮತ್ತು ಮಗಳಿಗಾಗಿ ತಿವ್ರ ಹುಡುಕಾಟ ನಡೆಸಿದ್ದು ಶೀಘ್ರವೆ ಬಂಧಿಸುವುದಾಗಿ ಪೋಲಿಸರು ತಿಳಿಸಿದ್ದಾರೆ.

Home add -Advt

ಮೇಕೆ , ಎಮ್ಮೆ ಮೇಯಿಸದಂತೆ ಎಚ್ಚರಿಸಿದ್ದಕ್ಕೆ ಯುವಕನ ಬರ್ಬರ ಹತ್ಯೆ

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button