ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ನಗರದ ಹೊರವಲಯದಲ್ಲಿರುವ ಮಚ್ಛೆ ಗ್ರಾಮದಲ್ಲಿ ಇಬ್ಬರು ವಿವಾಹಿತ ಯುವತಿಯರನ್ನು ಬರ್ಬರವಾಗಿ ಕೊಚ್ಚಿ ಕೊಲೆ ಮಾಡಿದ ಪ್ರಕರಣವನ್ನು ಪೊಲೀಸರು ಭೇದಿಸಿದ್ದು, ಮಹಿಳೆ ಸೇರಿ ಐವರನ್ನು ಬಂಧಿಸಿದ್ದಾರೆ.
ಕಲ್ಪನಾ ಎನ್ನುವ ಮಹಿಳೆಗೂ ಕೊಲೆಯಾದ ರೋಹಿಣಿಯ ಪತಿ ಗಂಗಪ್ಪನಿಗೂ ಅನೈತಿಕ ಸಂಬಂಧವಿತ್ತು. ಆತ ರೋಹಿಣಿಯನ್ನು ವಿವಾಹವಾಗಿದ್ದರಿಂದ ಕೋಪಗೊಂಡ ಕಲ್ಪನಾ ಆಕೆಯನ್ನು ಕೊಲೆ ಮಾಡಲು ತನ್ನ ಸಹೋದರ ಹಾಗೂ ಇನ್ನೂ ಇಬ್ಬರನ್ನು ನೇಮಿಸಿದ್ದಳು.
ಅವರು ಬೈಕ್ ನಲ್ಲಿ ಬಂದು ರೋಹಿಣಿಯನ್ನು ಕೊಲೋ ಮಾಡುವಾಗ ತಪ್ಪಿಸಲು ಬಂದ ರಾಜಶ್ರೀಯನ್ನು ಸಹ ಕೊಚ್ಚಿಹಾಕಿದ್ದರು.
ಪ್ರಕರಣದಲ್ಲಿ ಒಟ್ಟೂ ಐವರು ಭಾಗಿಯಾಗಿದ್ದಾರೆಂದು ಆರೋಪಿಸಲಾಗಿದ್ದು, ಎಲ್ಲರನ್ನೂ ಪೊಲೀಸರು ಬಂಧಿಸಿದ್ದಾರೆ.
ಸೆಪ್ಟಂಬರ್ 26ರಂದು ಸಂಜೆ 4 ಗಂಟೆ ಹೊತ್ತಿಗೆ ಬೈಕ್ ನಲ್ಲಿ ಬಂದ ಇಬ್ಬರು ವ್ಯಕ್ತಿಗಳು ಮಹಿಳೆಯರಿಬ್ಬರನ್ನು ಕೊಲೆ ಮಾಡಿದ್ದರು ಎಂದು ಶಂಕಿಸಲಾಗಿತ್ತು.
ಮೂಲತಃ ಶಿಂದೊಳಿ ಮತ್ತು ಸುಳಗಾದವರಾದ 21 ವರ್ಷದ ರೋಹಿಣಿ ಗಂಗಪ್ಪಾ ಹುಮನಿ ಹಾಗೂ ರಾಜಶ್ರೀ ರವಿ ಬನ್ನೂರ ಕೊಲೆಯಾಗಿದ್ದರು. ಇವರಿಬ್ಬರೂ ಗಂಡಂದಿರ ಜೊತೆ ಮಚ್ಚೆಯಲ್ಲಿ ಬಾಡಿಗೆ ಮನೆ ಹಿಡಿದು ವಾಸವಾಗಿದ್ದರು. ಸಂಜೆ ವಾಕಿಂಗ್ ಹೋದಾಗ ದುಷ್ಕರ್ಮಿಗಳು ಕೊಲೆ ಮಾಡಿದ್ದರು.
ಶಿಂಧೋಳಿ ಗ್ರಾಮದ ರಾಜಶ್ರೀ ಒಂದೂವರೆ ವರ್ಷದ ಹಿಂದೆ ಕಾಳೆನಟ್ಟಿ ಗ್ರಾಮದ ರವಿ ಜೊತೆ ಹಾಗೂ ಸುಳಗಾ ಗ್ರಾಮದ ರೋಹಿಣಿ ಅದೆ ಗ್ರಾಮದ ಗಂಗಪ್ಪಾ ಜೊತೆ ಒಂದು ವರ್ಷದ ಹಿಂದೆ ಮದುವೆಯಾಗಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ