ಪೊಲೀಸ್ ಠಾಣೆ ಎದುರೇ ಹರಿಯಿತು ನೆತ್ತರು : updated News

https://youtu.be/tav-Kh5UW-A
ಪ್ರಗತಿವಾಹಿನಿ ಸುದ್ದಿ, ಕಿತ್ತೂರು – ಇಲ್ಲಿಯ ಪೊಲೀಸ್ ಠಾಣೆ ಎದುರೇ ವ್ಯಕ್ತಿಯೋರ್ವನನ್ನು ಭೀಕರವಾಗಿ ಕೊಲೆಗೈಯ್ಯಲು ಯತ್ನಿಸಲಾಗಿದೆ. ಮಧ್ಯಾಹ್ನ ಈ ಘಟನೆ ನಡೆದಿದ್ದು, ಆರೋಪಿಗಳಿಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.
ಬೈಲಹೊಂಗಲ ತಾಲೂಕಿನ ಬೆಳವಡಿ ಗ್ರಾಮದ ಫಕೀರಪ್ಪ ಮುರಾರಿ (61) ಕೊಲೆ ತೀವ್ರ ಹಲ್ಲೆಗೊಳಗಾದ ವ್ಯಕ್ತಿ. ಇವರು ಅಂಗವಿಕಲರಾಗಿದ್ದರು. ಕಬ್ಬು ಕಡಿಯುವ ಮಚ್ಚಿನಿಂದ ಕೊಚ್ಚಿ ಅವರನ್ನು ಕೊಲೆ ಮಾಡಲು ಯತ್ನಿಸಲಾಗಿದೆ.
ಓಡಿ ಹೋಗುತ್ತಿದ್ದ ಇಬ್ಬರನ್ನು ಬಂಧಿಸುವಲ್ಲಿ ಕಿತ್ತೂರು ಪೊಲೀಸರು ಯಶಸ್ವಿಯಾಗಿದ್ದಾರೆ. ಶಂಕರೆಪ್ಪ ಫಕೀರಪ್ಪ ಲಚ್ಚಮ್ಮನವರ್ (32) ಮತ್ತು ಮಂಜುನಾಥ ಶಿವಪ್ಪ ಲಚ್ಚಮ್ಮನವರ್ (30) ಬಂಧಿತರು.
ಮಕ್ಕಳೇ ಕಟುಕರು
ಆರೋಪಿಗಳಲ್ಲಿ ಓರ್ವ ಫಕೀರಪ್ಪ ಮುರಾರಿಯ ಮಗನಾಗಿದ್ದು, ಇನ್ನೋರ್ವ ತಮ್ಮನ ಮಗ ಎಂದು ಗೊತ್ತಾಗಿದೆ. ಫಕೀರಪ್ಪ ಮುರಾರಿ ಮೃತನಾಗಿದ್ದಾನೆ ಎಂದೇ ಎಲ್ಲರೂ ಭಾವಿಸಿದ್ದರು. ಆರಂಭದಲ್ಲಿ ಪೊಲೀಸರೂ ಹಾಗೆಯೇ ಭಾವಿಸಿದ್ದರು.
ಆದರೆ ನಂತರ ಪರಿಶೀಲಿಸಿದಾಗ ಆತ ಉಸಿರಾಡುತ್ತಿದ್ದ. ತಕ್ಷಣ ಹುಬ್ಬಳ್ಳಿಯ ಕೆಎಂಸಿ ಆಸ್ಪತ್ರೆಗೆ ಸಾಗಿಸಲಾಗಿದೆ. ಆತ ಜೀವನ್ಮರಣದ ಮಧ್ಯೆ ಹೋರಾಡುತ್ತಿದ್ದಾನೆ.




