Belagavi NewsBelgaum NewsCrimeKannada NewsKarnataka NewsNationalPolitics

*ಕೊಲೆ, ಬೆದರಿಕೆ, ಕಾನೂನು ಬಾಹಿರಿ ಚಟುವಟಿಕೆ: ಇಬ್ಬರನ್ನು ಗಡಿಪಾರು ಮಾಡಿದ ಎಸ್ ಪಿ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಕೊಲೆ ಸೇರಿದಂತೆ ಕಾನೂನು ಬಾಹಿರ ಚಟುವಟಿಕೆಗಳಲ್ಲಿ ಭಾಗವಹಿಸಿ ಕಾನೂನು ಸುವ್ಯವಸ್ಥೆಗೆ ಭಂಗ ತರುವಂತ ಕೆಲಸ ಮಾಡುತ್ತಿದ್ದ ಹುಕ್ಕೇರಿ ತಾಲೂಕಿನ ಇಬ್ಬರು ಪುಡಿ ರೌಡಿಗಳಿಗೆ ಗಡಿಪಾರು ಆದೇಶ ಮಾಡಿ ಬೆಳಗಾವಿ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಕೆ ರಾಮರಾಜನ್ ಅವರು ಆದೇಶ ಮಾಡಿದ್ದಾರೆ.

ಹುಕ್ಕೇರಿ ತಾಲೂಕಿನ ಇಂಗಳಿ ಗ್ರಾಮದಲ್ಲಿ ನಡೆದ ಕೊಲೆ ಸೇರಿದಂತೆ ಕಾನೂನು ಬಾಹಿರ ಚಟುವಟಿಕೆಗಳಲ್ಲಿ ಭಾಗವಹಿಸಿ ಕಾನೂನು ಸುವ್ಯವಸ್ಥೆಗೆ ಭಂಗ ತರುವಂತ ಕೆಲಸ ಮಾಡುತ್ತಿದ್ದ ಲಾಡಜಿಸಾಬ ಗಜಬರಸಾಬ ಮುಲ್ತಾನಿಗೆ ಬಾಗಲಕೋಟ ಜಿಲ್ಲೆಯ ಜಮಖಂಡಿ ತಾಲೂಕಿನ ಸಾವಳಗಿ ಪೋಲಿಸ್ ಠಾಣೆ ವ್ಯಾಪ್ತಿಗೆ ಹಾಗೂ ಪಾರಿಷ ಉರ್ಫ ಪ್ರಶಾಂತ ಸುರೇಶ ನಾಶಿಪುಡಿಗೆ ಧಾರವಾಡ ಉಪ ನಗರ ಪೋಲಿಸ್ ಠಾಣೆ ವ್ಯಾಪ್ತಿಗೆ ರಿಂದ ಗಡಿಪಾರು ಮಾಡಿ ಆದೇಶ ಹೋರಡಿಸಲಾಗಿದೆ.

Home add -Advt

ಈ ಇಬ್ಬರು ಹುಕ್ಕೇರಿ ತಾಲೂಕಿನ ಯಮಕನಮರ್ಡಿ ಪೋಲಿಸ್ ಠಾಣೆ ವ್ಯಾಪ್ತಿಯಲ್ಲಿ ಕಾನೂನು ಬಾಹಿರ ಚಟುವಟಿಕೆಗಳ ಕುರಿತು ಪೋಲಿಸ್ ಇನ್ಸಪೇಕ್ಟರ ಜಾವಿದ ಮುಷಾಪುರ ನೀಡಿದ ವರದಿಯನ್ನು ಆಧರಿಸಿ ಬೆಳಗಾವಿ ಜಿಲ್ಲಾ ಪೋಲಿಸ್ ವರಿಷ್ಟಾಧೀಕಾರಿ ಕೆ ರಾಮರಾಜನ ಗಡಿಪಾರು ಆದೇಶ ಹೊರಡಿಸಿದ್ದಾರೆ.

Related Articles

Back to top button