ಕಿತ್ತೂರು ಬಳಿ ರಾತ್ರಿ ರೌಡಿ ಯುವಕನ ಮರ್ಡರ್; ಮತ್ತೋರ್ವನಿಗೆ ಗಂಭೀರ ಗಾಯ

ಪ್ರಗತಿವಾಹಿನಿ ಸುದ್ದಿ, ಕಿತ್ತೂರು: ಕಿತ್ತೂರ ಪೊಲೀಸ್ ಠಾಣಾ ವ್ಯಾಪ್ತಿಯ ತಿಗಡೊಳ್ಳಿ ಗ್ರಾಮದಲ್ಲಿ ರಾತ್ರಿ ರೌಡಿ ಶೀಟರ್ ಒಬ್ಬನನ್ನು ಮರ್ಡರ್ ಮಾಡಲಾಗಿದೆ.
ವಿಜಯ್ ರಾಮಚಂದ್ರ ಆರೇರ (32 ವರ್ಷ) ಕೊಲೆಯಾದವನು. ರೌಡಿಶೀಟರ್ ಆಗಿದ್ದ ಈತ ಮತ್ತು ಕಲ್ಲಪ್ಪ ಸದೆಪ್ಪ ಕ್ಯಾತನವರ ( 48 ವರ್ಷ) ಎಂಬಾತನ ಮಧ್ಯೆ ಕ್ಷುಲಕ ಕಾರಣಕ್ಕೆ ಜಗಳ ನಡೆದಿದ್ದು, ವಿಜಯ್ ಆರೇರ ಕುಡಿದ ನಶೆಯಲ್ಲಿ ಜಗಳ ತೆಗೆದು ಕಲ್ಲಪ್ಪನ ಮೇಲೆ ತಲವಾರದಿಂದ ಹಲ್ಲೆ ಮಾಡಿದ್ದ.
ನಂತರ ಕಲ್ಲಪ್ಪ ಕ್ಯಾತನವರ್ ಮತ್ತು ಭರತ್ ಹಿತ್ತಲಕೇರಿ ಎನ್ನುವವರು ಕೂಡಿ ವಿಜಯನ ಮೇಲೆ ಕುಡುಗೋಲುನಿಂದ ಹಲ್ಲೆ ಮಾಡಿದ್ದಾರೆ.
ಕಲ್ಲಪ್ಪ ಕ್ಯಾತನವರ್ ಕಿವಿ ಮತ್ತು ಹಿಂದಲೆ ಹತ್ತಿರ ಗಾಯವಾಗಿದ್ದು ಧಾರವಾಡ ಜಿಲ್ಲಾ ಆಸ್ಪತ್ರೆಗೆ ಸೇರಿಸಲಾಗಿದೆ. ಆತನು ಜೀವಪಾಯದಿಂದ ಪಾರಾಗಿದ್ದಾನೆ.
ವಿಜಯನ ಎರಡು ಕೈಗಳಿಗೆ ಬಾರಿ ಗಾಯವಾಗಿದ್ದು ಅಧಿಕ ರಕ್ತಸ್ರಾವವಾಗಿ ಸಾವಿಗೀಡಾಗಿದ್ದಾನೆ.
ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ