Kannada NewsKarnataka NewsLatest

ವಿವಾಹಿತ ಯುವತಿಯರ ಬರ್ಬರ ಕೊಲೆ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ನಗರದ ಹೊರವಲಯದಲ್ಲಿರುವ ಮಚ್ಛೆ ಗ್ರಾಮದ ಬ್ರಹ್ಮ ನಗರದ ಬಳಿ ಇಬ್ಬರು ವಿವಾಹಿತ ಯುವತಿಯರನ್ನು ಬರ್ಬರವಾಗಿ ಕೊಚ್ಚಿ ಕೊಲೆ ಮಾಡಲಾಗಿದೆ.

ಇಂದು ಸಂಜೆ 4 ಗಂಟೆ ಹೊತ್ತಿಗೆ ಈ ಘಟನೆ ನಡೆದಿದೆ. ಬೈಕ್ ನಲ್ಲಿ ಬಂದ ಇಬ್ಬರು ಕೊಲೆ ಮಾಡಿರಬಹುದು ಎಂದು ಶಂಕಿಸಲಾಗಿದೆ.

Home add -Advt

ಮೂಲತಃ ಶಿಂದೊಳಿ ಮತ್ತು ಸುಳಗಾದವರಾದ 21 ವರ್ಷದ ರೋಹಿಣಿ ಗಂಗಪ್ಪಾ ಹುಮನಿ ಹಾಗೂ  ರಾಜಶ್ರೀ ರವಿ ಬನ್ನೂರ ಇವರಿಬ್ಬರೂ ಗಂಡಂದಿರ ಜೊತೆ ಮಚ್ಚೆಯಲ್ಲಿ ಬಾಡಿಗೆ ಮನೆ ಹಿಡಿದು ವಾಸವಾಗಿದ್ದರು. ಸಂಜೆ ವಾಕಿಂಗ್ ಹೋದಾಗ ದುಷ್ಕರ್ಮಿಗಳು ಕೊಲೆ ಮಾಡಿದ್ದಾಗಿ ಗೊತ್ತಾಗಿದೆ.

ಶಿಂಧೋಳಿ ಗ್ರಾಮದ ರಾಜಶ್ರೀ ಒಂದೂವರೆ ವರ್ಷದ ಹಿಂದೆ ಕಾಳೆನಟ್ಟಿ ಗ್ರಾಮದ ರವಿ ಜೊತೆ ಹಾಗೂ ಸುಳಗಾ ಗ್ರಾಮದ ರೋಹಿಣಿ ಅದೆ ಗ್ರಾಮದ ಗಂಗಪ್ಪಾ ಜೊತೆ ಒಂದು ವರ್ಷದ ಹಿಂದೆ  ಮದುವೆಯಾಗಿದ್ದರು.

ಕೊಲೆ ಏಕೆ ನಡೆಯಿತು? ಕೊಲೆ ಮಾಡಿದವರ್ಯಾರು ಎನ್ನುವ ಮಾಹಿತಿ ಇನ್ನೂ ಸಿಕ್ಕಿಲ್ಲ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದಾರೆ.

ಇದೊಂದು ಮರ್ಯಾದಾ ಹತ್ಯೆಯೇ ಎನ್ನುವ ಶಂಕೆ ಕೂಡ ಮೂಡಿದೆ.

 

Related Articles

Back to top button