Latest

*ಮುರುಡೇಶ್ವರದಲ್ಲಿ ದುರಂತ: ಕಾಲೇಜು ವಿದ್ಯಾರ್ಥಿ ಸಮುದ್ರಪಾಲು*

ಪ್ರವಾಸಕ್ಕೆಂದು ಬಂದಿದ್ದ ವಿದ್ಯಾರ್ಥಿಗಳಿಬ್ಬರು ಈಜಲು ಹೋಗಿ ಸಮುದ್ರಪಾಲಾಗಿದ್ದು, ಓರ್ವ ವಿದ್ಯಾರ್ಥಿ ಮೃತಪಟ್ಟಿರುವ ಘಟನೆ ಉತ್ತರಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿನ ಮುರುಡೇಶ್ವರದಲ್ಲಿ ನಡೆದಿದೆ.

ಗೌತಮ್ (17) ಮೃತ ವಿದ್ಯಾರ್ಥಿ. ಧನುಷ್ ಡಿ. ಎಂಬ ವಿದ್ಯಾರ್ಥಿಯನ್ನು ರಕ್ಷಿಸಲಾಗಿದೆ. ಬೆಂಗಳೂರಿನ ವಿದ್ಯಾಸೌಧ ಪಿಯು ಕಾಲೇಜಿನ ವಿದ್ಯಾರ್ಥಿಗಳಾಗಿದ್ದ ಇಬ್ಬರೂ ಮುರುಡೇಶ್ವರಕ್ಕೆ ಪ್ರವಾಸಕ್ಕೆಂದು ಬಂದಿದ್ದರು. ಈ ವೇಳೆ ಈ ದುರಂತ ಸಂಭವಿಸಿದೆ.

ಸಮುದ್ರದಲ್ಲಿ ಈಜಲು ಹೋದಾಗ ಅಲೆಗಳ ಅಬ್ಬರಕ್ಕೆ ಸಿಲುಕಿ ನೀರುಪಾಲಾಗಿದ್ದಾರೆ. ಈ ವೇಳೆ ಲೈಫ್ ಗಾರ್ಡ್ ಹಾಗೂ ಪೊಲೀಸ್ ಸಿಬ್ಬಂದಿಗಳು ವಿದ್ಯಾರ್ಥಿಯೊಬ್ಬ ಅಲೆಗಳಲ್ಲಿ ಸಿಲುಕಿ ಒದ್ದಾಡುತ್ತಿದ್ದುದನ್ನು ಕಂಡು ರಕ್ಷಿಸಿದ್ದಾರೆ. ಆದರೆ ಇನ್ನೋರ್ವ ವಿದ್ಯಾರ್ಥಿ ಅದಾಗಲೇ ನೀರಿನಲ್ಲಿ ಮುಳುಗಿ ಕಣ್ಮರೆಯಾಗಿದ್ದ. ಬಳಿಕ ವಿಚಾರಿಸಿದಾಗ ಗೌತಮ್ ಕೂಡ ಈಜಲೆಂದು ಕಡಲಿಗೆ ಇಳಿದಿದ್ದ ಎಂಬುದು ಗೊತ್ತಾಗಿದೆ. ಸದ್ಯ ಗೌತಮ್ ಮೃತದೇಹ ಪತ್ತೆಯಾಗಿದ್ದು, ಸಮುದ್ರದಿಂದ ಹೊರತೆಗೆಯಲಾಗಿದೆ.


Home add -Advt

Related Articles

Back to top button