Latest

*ಯತ್ನಾಳ್ ವಿರುದ್ಧ ಪರೋಕ್ಷ ವಾಗ್ದಾಳಿ ನಡೆಸಿದ ಸಚಿವ ನಿರಾಣಿ*

ಪ್ರಗತಿವಾಹಿನಿ ಸುದ್ದಿ; ವಿಜಯಪುರ: ಕೆಲವೊಬ್ಬರು ನಮ್ಮ ಬಗ್ಗೆ, ಕೂಡಲಸಂಗಮ ಪೀಠದ ಬಗ್ಗೆ, ನಮ್ಮ ಸರ್ಕಾರ, ಪಕ್ಷ, ಪಕ್ಷದ ಹಿರಿಯರ ಬಗ್ಗೆ ಬಹಳ ಹಗುರವಾಗಿ ಮಾತನಾಡುತ್ತಾರೆ. ಆದರೆ ಹೀಗೆ ಮಾತನಾಡುವವರು ರಾಜಕೀಯಕ್ಕೆ ಬರುವ ಮೊದಲು ತಾವು ಏನಾಗಿದ್ದರು ಎಂಬುದನ್ನು ಅರಿತು ಮಾತನಾಡಬೇಕು ಎಂದು ಸಚಿವ ಮುರಿಗೇಶ್ ನಿರಾಣಿ, ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಗೆ ಪರೋಕ್ಷ ತಿರುಗೇಟು ನೀಡಿದ್ದಾರೆ.

ವಿಜಯಪುರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಚಿವ ನಿರಾಣಿ, ವೀರಶೈವ ಲಿಮ್ಗಾಯಿತ, ವೀರಶೈವ ಬಣಜ ಹಾಗೂ ಇಇನ್ನುಳಿದ ವೀರಶೈವ ಸಮಾಜದರು ಸಹೋದರರಂತೆ ಬಂದಿದ್ದೇವೆ. ಯಾವುದೇ ಸಮಾಜದ ಜೊತೆಗೂ ಬೇಧಭಾವ ವಿಲ್ಲದೇ ಒಟ್ಟಾಗಿ ಬಂದಿದ್ದೇವೆ. ಹೀಗಿರುವಾಗ ಸಮಾಜದ ಹಿರಿಯರಿಗೆ ಹಗುರವಾಗಿ ಮಾತನಾಡಿ, ತುಂಬಿದ ಸಭೆಯಲ್ಲಿ ಚಪ್ಪಾಳೆ ತಟ್ಟಿಸಿಕೊಳ್ಳುವುದು, ಬೇರೆಯವರ ಬಗ್ಗೆ ಮಾತನಾಡಿದರೆ ತಾನು ದೊಡ್ಡವನಾಗುತ್ತೇನೆ ಎಂಬ ರೀತಿಯಲ್ಲಿ ಬಿಂಬಿಸಿಕೊಳ್ಳುವ ಕೆಲಸ ನಡೆಯುತ್ತಿದೆ. ಇಂತವರು ಒಬ್ಬರಿಗೆ ಮಾತ್ರವಲ್ಲ ಸಮಾಜಕ್ಕೆ, ಇಡೀ ಜಿಲ್ಲೆಗೆ ಕಪ್ಪುಚುಕ್ಕೆಯಾಗಿದ್ದಾರೆ. ಅವರಿಗೆ ಮುಂದಿನ ದಿನಗಳಲ್ಲಿ ಜನರು ತಕ್ಕ ಪಾಠ ಕಲಿಸುತ್ತಾರೆ ಎಂದು ವಾಗ್ದಾಳಿ ನಡೆಸಿದರು.

Related Articles

ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ವಿಚಾರವಾಗಿ ಮಾಯನಾಡಿದ ಸಚಿವ ನಿರಾಣಿ, 2010 ರಲ್ಲಿ ಬಿ.ಎಸ್. ಯಡಿಯೂರಪ್ಪ ಸಿಎಂ ಆಗಿದ್ದರು. ಅಂದು ನಾನು ಕೈಗಾರಿಕಾ ಸಚಿವನಾಗಿದ್ದೆ. ಅಂದು ಪಂಚಮಸಾಲಿಗಳಿಗೆ 2ಎ ಮೀಸಲಾತಿ ನೀಡಬೇಕು ಎಂದು ಮನವಿ ಮಾಡಿದ್ದೆವು. ಅಂದು ಸಿಎಂ ಯಡಿಯೂರಪ್ಪನವರು ಕ್ಯಾಬಿನೇಟ್ ಸಬ್ ಕಮಿಟಿ ನೇಮಕ ಮಾಡಿದ್ದರು. ಅದರಲ್ಲಿ ನಾನು, ಬಸವರಾಜ್ ಬೊಮ್ಮಾಯಿ, ಸಿಎಂ ಉದಾಸಿ ಹಾಗೂ ನಾರಯಣಸ್ವಾಮಿ ಸದಸ್ಯರಾಗಿದ್ದೆವು. ಸಭೆಯಲ್ಲಿ 2ಎ ಮಾಡಲು ತೀರ್ಮಾನ ಕೈಗೊಂಡೆವು. ಅದಕ್ಕೂ ಮೊದಲು ವೀರಶೈವ ಲಿಂಗಾಯತ ಸಮಾಜದಲ್ಲಿ ಕೆಲ ಒಳಪಂಗಡಗಳು, ಪಂಚಮಸಾಲಿ ಯಾವುದೇ ಜಾತಿ ಕಾಲಂನಲ್ಲಿ ಇರಲಿಲ್ಲ. ಆ ಸಂದರ್ಭದಲ್ಲಿ ಇದನ್ನು ಬ್ಯಾಕ್ ವರ್ಡ್ ಕಮಿಟಿಯಲ್ಲಿ ಸೇರಿದವರು ಯಡಿಯೂರಪ್ಪನವರು ಎಂಬುದನ್ನು ಗಮನಿಸಬೇಕು ಎಂದು ಹೇಳಿದರು.

*ಸಚಿವ ಮುರುಗೇಶ್ ನಿರಾಣಿಗೆ ಸವಾಲು ಹಾಕಿದ ಶಾಸಕ ಯತ್ನಾಳ್*

https://pragati.taskdun.com/basanagouda-patil-yatnalmurugesh-niranivijayapura/

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button