LatestUncategorized

*ಕಾಂಗ್ರೆಸ್ ಪಕ್ಷ ನಾವಿಕನಿಲ್ಲದ ಹಡಗು ಎಂಬುದು ಕನ್ನಡಿಗರಿಗೆ ಅರ್ಥವಾಗಿದೆ; ಹಿಂದುಳಿದ ಮತಕ್ಷೇತ್ರ ಎಂಬ ಹಣೆಪಟ್ಟಿ ಕಳಚಿದೆ: ಮುರುಗೇಶ ನಿರಾಣಿ*

ಪ್ರಗತಿವಾಹಿನಿ ಸುದ್ದಿ; ಬೀಳಗಿ: ನಂಜುಂಡಪ್ಪ ವರದಿಯನ್ವಯ ಹಿಂದುಳಿದ ಮತಕ್ಷೇತ್ರವಾಗಿದ್ದ ಬೀಳಗಿಗೆ ಹೊಸ ಕಾಯಕಲ್ಪ ನೀಡಿ ಅಭಿವೃದ್ದಿಯ ಹೊಸ ದಿಕ್ಕಿನಡೆಗೆ ತೆಗೆದುಕೊಂಡು ಹೋಗುವ ಪ್ರಯತ್ನದಲ್ಲಿ ಯಶಸ್ವಿಯಾಗಿದ್ದೇನೆ ಅದರ ಫಲವಾಗಿ ಎಲ್ಲ ರಂಗಗಳಲ್ಲೂ ಬಿಜೆಪಿ ಅಭಿವೃದ್ಧಿಯಲ್ಲಿ ಮುಂಚೂಣಿಯಲ್ಲಿ ಸಾಗುವ ಮೂಲಕ ಹಿಂದುಳಿದ ಮತಕ್ಷೇತ್ರ ಎಂಬ ಹಣೆಪಟ್ಟಿ ಕಳಚಿದೆ ಎಂದು ಮುರುಗೇಶ ನಿರಾಣಿ ಹೇಳಿದರು.

ಯಳ್ಳಿಗುತ್ತಿ, ಯಂಕಂಚಿ, ಸಾಳಗುಂದಿಯಲ್ಲಿ ಮನೆ ಮನೆಗೆ ತೆರಳಿ ಮತಯಾಚನೆ ಮಾಡಿ ನಂತರ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು ನೆನೆಗುದಿಗೆ ಬಿದ್ದಿದ್ದ ಯಳ್ಳಿಗುತ್ತಿ ನೀರಾವರಿ ಯೋಜನೆಯನ್ನು ೨೦೧೯ರಲ್ಲಿ ಟರ್ನ್ ಕೀ ಆಧಾರದ ಮೇಲೆ ಚಾಲನೆ ನೀಡಿ ನಿಗದಿತ ಅವಧಿಯಲ್ಲಿ ಯೋಜನೆ ಪೂರ್ಣಗೊಳಿಸಿದ ಪರಿಣಾಮ ಯಳ್ಳಿಗುತ್ತಿ, ಯಂಕಂಚಿ, ಅಂಡಮುರನಾಳ ಹಾಗೂ ಸಿದ್ನಾಳ ಗ್ರಾಮಗಳ ೧೮೫೩ ಎಕರೆ ರೈತರ ಭೂಮಿಗೆ ನೀರು ದೊರಕಿದೆ. ಕಳೆದ ೫ ವರ್ಷಗಳ ಅವಧಿಯಲ್ಲಿ ೨ ಸಾವಿರ ಕೋಟಿಗೂ ಅಧಿಕ ಅನುದಾನದಲ್ಲಿ ೧೯ ನೀರಾವರಿ ಯೋಜನೆಗಳ ಮೂಲಕ ೧.೨೭ ಲಕ್ಷ ಎಕರೆಗೆ ನೀರಾವರಿ ಸೌಲಭ್ಯ ನೀಡುವ ಕಾರ್ಯ ಭರದಿಂದ ಸಾಗಿದೆ. ಉದ್ದೇಶಿತ ಎಲ್ಲ ನೀರಾವರಿ ಯೋಜನೆಗಳು ಸಕಾಲದಲ್ಲಿ ಪೂರ್ಣಗೊಳಿಸಿ ನಮ್ಮ ರೈತರ ಭೂಮಿಗೆ ನೀರು ನೀಡುವುದಕ್ಕಾಗಿ ನನಗೆ ಮತ್ತೊಮ್ಮೆ ಆಶಿರ್ವದಿಸಿ ಎಂದು ವಿನಂತಿಸಿಕೊಂಡರು.

ಕಾಂಗ್ರೆಸ್ ಅಸ್ತಿತ್ವ ಕಳೆದುಕೊಳ್ಳುತ್ತಿರುವ ಪಕ್ಷ. ನಾವಿಕನಿಲ್ಲದ ಹಡಗು. ಬಿಜೆಪಿ ಬಲಿಷ್ಠವಾಗಿದೆ. ನರೇಂದ್ರ ಮೋದಿ, ಅಮೀತ ಷಾ, ನಡ್ಡಾಆ, ಯೋಗಿಯಂತಹ ರಾಷ್ಟç ನಾಯಕರಿದ್ದಾರೆ. ರಾಜ್ಯದಲ್ಲಿಯೂ ನಾಯಕತ್ವ ಸದೃಢವಾಗಿದೆ. ಬಿಜೆಪಿ ಆಣೆಕಟ್ಟು ಒಡೆದಿಲ್ಲ, ನಮ್ಮದು ಕಾರ್ಯಕರ್ತರ ಪಕ್ಷ, ನಮ್ಮ ಕಾರ್ಯಕರ್ತರ ಉತ್ಸಾಹದ ಸುನಾಮಿ ಎದ್ದಿದೆ. ಇದು ಡಿ. ಕೆ. ಶಿವಕುಮಾರ ಅವರನ್ನು ನಿದ್ದೆಗೆಡಿಸಿದೆ. ಪೂರ್ಣ ಬಹುಮತದೊಂದಿಗೆ ಮತ್ತೆ ಅಧಿಕಾರಕ್ಕೆ ಬರುತ್ತೇವೆ ಎಂದು ಅವರು ಹೇಳಿದರು.

ಈ ಸಂದರ್ಭದಲ್ಲಿ ಪರಸಪ್ಪ ಜಮಖಂಡಿ ಸಿದ್ದಪ್ಪ ನಕ್ಕರಗುಂದಿ ಶ್ರಿಕಾಂತ ಪಾಟೀಲ ವಿಠ್ಠಲ ಪೂಜಾರಿ, ಬಸವರಾಜ ಗೌಡರ, ಶಿವನಪ್ಪ ಬಣಕಾರ, ಶ್ರೀಶೈಲ ಮುರನಾಳ, ರಮೇಶ ನಾರಪ್ಪನವರ, ಹಣಮಂತಗೌಡ ಪಾಟೀಲ ಈಶ್ವರ ಹುಂಡೆಕರ, ಪ್ರಕಾಶ ಗೌಡರ ಸೇರಿದಂತೆ ಹಲವರು ಉಪಸ್ಥಿತರಿದ್ದರು.

https://pragati.taskdun.com/cm-basavaraj-bommaid-k-shivakumarreaction-2/

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button