Latest

ಮುರುಘಾಮಠದಲ್ಲಿ ಕಳ್ಳತನ

ಪ್ರಗತಿವಾಹಿನಿ ಸುದ್ದಿ; ಚಿತ್ರದುರ್ಗ: ಚಿತ್ರದುರ್ಗದ ಮುರುಘಾಮಠದಲ್ಲಿ ಕಳ್ಳತನ ನಡೆದಿದ್ದು, ಮಠದ ಆವರಣದಲ್ಲಿ ಹಾಕಿದ್ದ ಫೋಟೋಗಳನ್ನೇ ಕಳ್ಳರು ಹೊತ್ತೊಯಿದ್ದಾರೆ.

ಮಠದ ರಾಜಾಂಗಣದ ಗೋಡೆಗೆ ಹಾಕಿದ್ದ 47 ಫೋಟೋಗಳನ್ನು ಕಳ್ಳರು ಕದ್ದು ಪರಾರಿಯಾಗಿದ್ದಾರೆ. ವಿವಿಧ ಗಣ್ಯರ ಜೊತೆ ಮುರುಘಾ ಶ್ರೀಗಳು ಇರುವ ಫೋಟೋಗಳು, ಧಾರ್ಮಿಕ ಮುಖಂಡರು, ರಷ್ಟ್ರಪತಿ, ಪ್ರಧಾನಿ, ಹಲುವು ಮುಖ್ಯಮಂತ್ರಿಗಳ ಜೊತೆಗೆ ಮುರುಘಾಶ್ರೀಗಳಿರುವ ಫೋಟೋಗಳನ್ನು ಹಾಗೂ ಮಠದ ಗೋಡೆಗೆ ಹಾಕಿದ್ದ ಇತರ ಫೋಟೋಗಳು ಕಳ್ಳತನವಾಗಿದೆ.

ಫೋಟೋಗಳನ್ನು ಕದ್ದೊಯ್ದಿರುವ ಇಬ್ಬರು ವ್ಯಕ್ತಿಗಳ ಕೃತ್ಯ ಸಿಸಿಟಿಯಲ್ಲಿ ಸೆರೆಯಾಗಿದೆ. ಚಿತ್ರದುರ್ಗ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸುಳೇಭಾವಿ ಜೋಡಿ ಕೊಲೆ ಪ್ರಕರಣ; ಇಬ್ಬರು ಪೊಲೀಸ್ ಸಿಬ್ಬಂದಿಗಳು ಸಸ್ಪೆಂಡ್

https://pragati.taskdun.com/latest/sulebhavi-gangwardouble-murder-casetwo-police-suspended/

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button