
ಪ್ರಗತಿವಾಹಿನಿ ಸುದ್ದಿ; ಚಿತ್ರದುರ್ಗ: ಪೋಕ್ಸೋ ಪ್ರಕರಣದಲ್ಲಿ ನ್ಯಾಯಾಂಗ ಬಂಧನದಲ್ಲಿರುವ ಮುರುಘಾಶ್ರೀಗಳ ವಿರುದ್ಧ ಮತ್ತೊಂದು ಪ್ರಕರಣ ದಾಖಲಾಗಿದ್ದು, ಬಾಲ ನ್ಯಾಯ ಕಾಯ್ದೆ ಉಲ್ಲಂಘನೆ ಪ್ರಕರಣ ದಾಖಲಾಗಿದೆ.
ಮುರುಘಾಶ್ರೀ, ಮಠದ ಕಾರ್ಯದರ್ಶಿ ಪರಮಶಿವಯ್ಯ, ಮಠದ ವಸತಿ ಶಾಲೆಯ ಲೇಡಿ ವಾರ್ಡನ್ ರಶ್ಮಿ ಹಾಗೂ ಮಡಿಲು ದತ್ತು ಕೇಂದ್ರದ ಮುಖ್ಯಸ್ಥೆ ವೀಣಾ ವಿರುದ್ಧ ಸಿಡ್ಬ್ಲ್ಯೂಸಿ ಅಧಿಕಾರಿಗಳು ಬಾಲ ನ್ಯಾಯ ಕಾಯ್ದೆ ಉಲ್ಲಂಘನೆ ಪ್ರಕರಣ ದಾಖಲಿಸಿದ್ದಾರೆ.
ಮುರುಘಾಶ್ರೀಗಳ ವಿರುದ್ಧ ಪೋಕ್ಸೋ ಪ್ರಕರಣ ದಾಖಲಾಗಿರುವ ಹಿನ್ನೆಲೆಯಲ್ಲಿ ಮಠಕ್ಕೆ ಸಿಡ್ಲ್ಯೂಸಿ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದ ವೇಳೆ ಮಠದ ಹಾಸ್ಟೇಲ್ ನಲ್ಲಿ ಇಬ್ಬರು ಬಾಲಕಿಯರು ಪತ್ತೆಯಾಗಿದ್ದರು. ಸಿಡಬ್ಲ್ಯೂಸಿ ಗಮನಕ್ಕೆ ತರದೇ ಇಬ್ಬರು ಮಕ್ಕಳ ಪಾಲನೆ ಮಾಡುತ್ತಿರುವ ಆರೋಪ ಹಿನ್ನೆಲೆಯಲ್ಲಿ ಅಧಿಕಾರಿಗಳು ಚಿತ್ರದುರ್ಗ ಗ್ರಾಮೀಣ ಠಾಣೆಯಲ್ಲಿ ಮುರುಘಾಶ್ರೀ ಸೇರಿ ನಾಲ್ವರ ವಿರುದ್ಧ ಬಾಲ ನ್ಯಾಯ ಕಾಯ್ದೆ ಉಲ್ಲಂಘನೆ ಕೇಸ್ ದಾಖಲಿಸಿದ್ದಾರೆ.
4 ವರ್ಷದ ಬಾಲಕಿ ಮೇಲೆ ಪ್ರಾಂಶುಪಾಲರ ಚಾಲಕನಿಂದ ಅತ್ಯಾಚಾರ
https://pragati.taskdun.com/latest/hydrabad4yers-girlrapeschool-principal-driver/