Latest

ಮುರುಘಾ ಮಠದಲ್ಲಿರುವ ಹಣದ ಬಗ್ಗೆ ಮಾಜಿ ಸಚಿವರ ಆಡಿಯೋ ವೈರಲ್

ಪ್ರಗತಿವಾಹಿನಿ ಸುದ್ದಿ; ಚಿತ್ರದುರ್ಗ: ಪೋಕ್ಸೋ ಪ್ರಕರಣದಲ್ಲಿ ಬಂಧಿತರಾಗಿರುವ ಮುರುಘಾಶ್ರೀಗಳ ಪೀಠತ್ಯಾಗಕ್ಕೆ ಒತ್ತಾಯಗಳು ಕೇಳಿ ಬಂದಿದ್ದು, ಈ ನಡುವೆ ಮಠದ ಪೂಜಾಕೈಂಕರ್ಯ ನೆರವೇರಿಸಲು ಉಸ್ತುವಾರಿಯಾಗಿ ಬಸವಪ್ರಭುಶ್ರೀಗಳನ್ನು ನೇಮಕ ಮಾಡಲಾಗಿದೆ. ಈ ಎಲ್ಲಾ ಬೆಳವಣಿಗೆಗಳ ನಡುವೆ ಮುರುಘಾಮಠದಲ್ಲಿ ಮಾಜಿ ಸಿಎಂ ಹಾಗೂ ಮಾಜಿ ಸಚಿವರ ಹಣವಿರುವ ವಿಚಾರವಾಗಿ ಮಾಜಿ ಸಚಿವೆ ರಾಣಿ ಸತೀಶ್ ಮಾತನಾಡಿದ್ದಾರೆ ಎನ್ನಲಾದ ಆಡಿಯೊ ವೈರಲ್ ಆಗಿದೆ.

ಮುರುಘಾಮಠದಲ್ಲಿ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಹಾಗೂ ಮಾಜಿ ಸಚಿವ ಶಾಮನೂರು ಶಿವಶಂಕರಪ್ಪ ಅವರ ಹಣವಿದೆ ಎಂದು ಚಿತ್ರದುರ್ಗದ ವೀರಶೈವ ಮಹಾಸಭಾ ಜಿಲ್ಲಾಧ್ಯಕ್ಷ ಮಹಡಿ ಶಿವಮೂರ್ತಿ ಅವರೊಂದಿಗೆ ರಾಣಿ ಸತೀಶ್ ಮಾತನಾಡಿರುವ ಆಡಿಯೋ ಭಾರಿ ವೈರಲ್ ಆಗಿದೆ.

ಮುರುಘಾ ಶ್ರೀ ಪ್ರಕರಣ ಸಮಾಜ ತಲೆ ತಗ್ಗಿಸುವಂತದ್ದು. ಎಂ.ಬಿ.ಪಾಟೀಲ್, ಈಶ್ವರ ಖಂಡ್ರೆ, ಶಾಮನೂರು ಅಂತವರು ವಿರೋಧಿಸಬೇಕಿತ್ತು. ಹೀಗೆ ಮೌನವಾಗಿದ್ದರೆ ವೀರಶೈವರಿಂದ ಮಠ ಕೈತಪ್ಪುವ ಸಾಧ್ಯತೆ ಇದೆ. ವೀರಶೈವ ಮಹಾಸಭಾ ಯಾಕೆ ಈವರೆಗೆ ಸುಮ್ಮನಿದೆ ಗೊತ್ತಿಲ್ಲ. ಮುರುಘಾಶ್ರೀ ಭಂಡ, ನಿರ್ಲಜ್ಜ ಮನೋಭಾವದವರು. ಶಾಮನೂರು ಹಣ ಮುರುಘಾಶ್ರೀ ಬಳಿಯಿದೆ ಎಂದು ಜನ ಮಾತನಾಡಿಕೊಳ್ತಾರೆ. ಈಗ ಬಸವಪ್ರಭುಶ್ರೀ ನೇಮಕ ಮಾಡಲಾಗಿದೆ. ಸಿಎಂ ಶೀಘ್ರವಾಗಿ ಮಠಕ್ಕೆ ಆಡಳಿತಾಧಿಕಾರಿ ನೇಮಕ ಮಾಡಬೇಕು ಎಂದು ಹೇಳಿದ್ದಾರೆ.

ಸಾರಿಗೆ ನಿಗಮಕ್ಕೆ ಮೇಜರ್ ಸರ್ಜರಿ; ನಾಲ್ಕು ನಿಗಮ ವಿಲೀನಕ್ಕೆ ನಿರ್ಧಾರ

https://pragati.taskdun.com/latest/transport4-nigamamurgeshriramulu/

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button