Latest

*ಮಹದಾಯಿ, ಕಳಸಾ ಬಂಡೂರಿ ವಿಚಾರದಲ್ಲಿ ಕಾಂಗ್ರೆಸ್ ಸಾಧನೆಯೇನು? ಜಗದೀಶ್ ಶೆಟ್ಟರ್ ಪ್ರಶ್ನೆ*

ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ಮಹದಾಯಿ ಕುರಿತಾಗಿ ಕಾಂಗ್ರೆಸ್ ಸಮಾವೇಶದ ಬಗ್ಗೆ ಕಿಡಿಕಾರಿರುವ ಮಾಜಿ ಸಿಎಂ ಜಗದೀಶ್ ಶೆಟ್ಟರ್, ಮಹದಾಯಿ, ಕಳಸಾ ಬಂಡೂರಿ ವಿಚಾರದಲ್ಲಿ ಕಾಂಗ್ರೆಸ್ ಸಾಧನೆಯೇನು ಎಂದು ಪ್ರಶ್ನಿಸಿದ್ದಾರೆ.

ಬೆಳಗಾವಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಶೆಟ್ಟರ್, ಕಾಗ್ರೆಸ್ ನವರು ಎಲೆಕ್ಷನ್ ಬಂದಾಗ ಎಚ್ಚರಗೊಳ್ತಾರೆ. ಚುನಾವಣೆ ಬಂದಾಗ ಕಣ್ಣೀರು ಹಾಕ್ತಾರೆ. ಈಗ ಮಹದಾಯಿ ಬಗ್ಗೆ ಸಮಾವೇಶ ಮಾಡ್ತಾರೆ ಅಂದ್ರೆ ಅದು ನಗೆಪಾಟಲು. ನಮ್ಮ ಸರ್ಕಾರದಲ್ಲಿಯೇ ಎಲ್ಲವನ್ನೂ ಮಾಡಿದ್ದು, ಅವರ ಸರ್ಕಾರದಲ್ಲಿ ಒಂದಿಂಚೂ ಮೂವ್ ಆಗಿಲ್ಲ. ಅವರ ಸರ್ಕಾರದಲ್ಲಿ ಹೋರಾಟಗಾರರ ಮೇಲೆ ಲಾಠಿ ಚಾರ್ಜ್ ಮಾಡಿಸಿದರು ಎಂದು ವಾಗ್ದಾಳಿ ನಡೆಸಿದ್ದಾರೆ.

Home add -Advt

ಕಾಂಗ್ರೆಸ್ ಎಲ್ಲದರಲ್ಲೂ ರಾಜಕೀಯ ಮಾಡುತ್ತಿದೆ. ಕುಕ್ಕರ್ ಬಾಂಬ್ ನಲ್ಲೀ ಡಿಕೆಶಿ ರಾಜಕಾರಣ ಮಾಡಿದ್ರು. ಈಗ ಕೋವಿಡ್ ವಿಚಾರದಲ್ಲಿ ರಾಜಕೀಯ ಮಾಡಲು ಹೊರಟಿದ್ದಾರೆ ಎಂದು ಹೇಳಿದರು.

*ರಾಜ್ಯದಲ್ಲಿ ಮತ್ತೆ ಮಾಸ್ಕ್ ಕಡ್ಡಾಯ; ಆರೋಗ್ಯ ಸಚಿವ ಡಾ.ಸುಧಾಕರ್ ಹೇಳಿದ್ದೇನು?*

https://pragati.taskdun.com/karnataka-covidmask-mandatorydr-sudhakarresponse/

Related Articles

Back to top button