Latest

*ವಿಕಲಚೇತನ ಈಜು ಪಟುಗಳಿಗೆ ಮುರುಘೇಂದ್ರ ಪಾಟೀಲ ಫೌಂಡೇಶನ್ ಆರ್ಥಿಕ ನೆರವು*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ : ಈಜು ಸ್ಫರ್ಧೆಯಲ್ಲಿ ಸಾಧನೆ ಮಾಡಿದ ವಿಕಲಚೇತನ ಯುವಕರಿಗೆ ಮುರುಘೇಂದ್ರ ಗೌಡ ಪಾಟೀಲ್ ಫೌಂಡೇಶನ್ ವತಿಯಿಂದ ಆರ್ಥಿಕ ನೆರವು ನೀಡಲಾಯಿತು.

ವಿಕಲಚೇತನರ ಈಜು ಸ್ಪರ್ಧೆಯಲ್ಲಿ ಬೆಳಗಾವಿಯ ಯುವಕರಾದ ಸುಮಿತ ಮುತಗೇಕರ ಹಾಗೂ ಸಾಹಿಲ್ ಜಾಧವ ಹಲವು ಸಾಧನೆಗಳನ್ನು ಮಾಡಿ, ಆಸ್ಟೇಲಿಯಾದಲ್ಲಿ ನಡೆಯುವ ಅಂತರಾಷ್ಟ್ರಿಯ ಮಟ್ಟದ ಈಜು ಸ್ಪರ್ಧೆಗೆ ಆಯ್ಕೆ ಆದ ಹಿನ್ನೆಲೆಯಲ್ಲಿ ಮುರಗೇಂದ್ರಗೌಡಾ ಎಸ್ ಪಾಟೀಲ್ ಫೌಂಡೇಶನ್ ವತೀಯಿಂದ ಅವರಿಗೆ ಅಭಿನಂದನೆಯನ್ನು ಸಲ್ಲಿಸಿ, ಆರ್ಥಿಕ ನೆರವನ್ನು ನೀಡಲಾಯಿತು. ಹಾಗೂ ಸ್ವಿಮಿಂಗ ಕ್ಷೇತ್ರದಲ್ಲಿ ಬೆಳಗಾವಿ ಯುವಕರ ವಿಜಯ ಪತಾಕೆ ಅವರದಾಗಲ್ಲಿ ಎಂದು ಶುಭಹಾರೈಸಲಾಯಿತು..

ಈ ಸಂದರ್ಭದಲ್ಲಿ ಬಿಜೆಪಿಯ ನಾಯಕರು ಹಾಗೂ ಮುಖಂಡರಾದ ಮುರುಗೇಂದ್ರಗೌಡ ಪಾಟೀಲ್ ಆರ್ ಎಸ್ ಎಸ್ ಪ್ರಮುಖರು, ಕ್ರೀಡಾ ತರಬೇತುದಾರರಾದ ಅಶೋಕ್ ಶಿಂತ್ರೆ, ಬಾಬುರಾಜ್ ಬಖೇಡಿ ಹಾಗೂ ಎಲ್ಲಾ ಸದಸ್ಯರು ಉಪಸ್ಥಿತರಿದ್ದು, ಶುಭ ಹಾರೈಸಿದರು.

Home add -Advt

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button